ಸೋಮವಾರ, ಸೆಪ್ಟೆಂಬರ್ 28, 2020
23 °C

ಸಮುದ್ರದಲ್ಲಿ 36 ಗಂಟೆ ಹೋರಾಡಿ ದಡ ಸೇರಿದ ಮೀನುಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್‌ ಬೋಟ್‌ ಭಾನುವಾರ ತಡರಾತ್ರಿ ಬಿರುಗಾಳಿಗೆ ಸಿಲುಕಿದ್ದು, ಬೋಟ್‌ನ ಡಿಂಗಿ (ಪಾತಿ)ಯ ಜೊತೆಗೆ ನಾಪತ್ತೆಯಾಗಿದ್ದ ಮೀನುಗಾರ, ಉಳ್ಳಾಲ ಹೊಯ್ಗೆ ನಿವಾಸಿ ಆರ್ಥರ್‌ ಸುನಿಲ್‌ ಕುವೆಲ್ಲೊ 36 ಗಂಟೆಗಳ ನಂತರ ಮಂಗಳವಾರ ಮಲ್ಪೆಯಲ್ಲಿ ಪತ್ತೆಯಾಗಿದ್ದಾರೆ.

ಪರ್ಸಿನ್‌ ಬೋಟ್‌ನಲ್ಲಿ ಉಳ್ಳಾಲ ಉಳಿಯದ 29 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಭಾನುವಾರ ಬೆಳಿಗ್ಗೆ 11.30ಕ್ಕೆ ಬೋಟ್‌ನ ಬೆಲ್ಟ್ ತುಂಡಾಗಿದ್ದು, ಸಮುದ್ರಕ್ಕೆ ಬೀಸಿದ್ದ ಬಲೆ ಸಂಪೂರ್ಣ ಮುದ್ದೆಯಾಗಿತ್ತು. ಮೀನುಗಾರರು ರಾತ್ರಿಯವರೆಗೆ ಬಲೆ ಬಿಡಿಸುವ ಕಾರ್ಯದಲ್ಲಿ ತೊಡಗಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಗಾಳಿ– ಮಳೆ ಹೆಚ್ಚಾಗಿದ್ದು, ಬೋಟ್‌ಗೆ ಕಟ್ಟಿದ್ದ ಪಾತಿ ಹಗ್ಗ ತುಂಡಾಗಿ ಸಮುದ್ರ ಪಾಲಾಯಿತು.

ಸುನಿಲ್‌ ಅವರು ಬಲೆ ಎಳೆಯಲೆಂದು ಪಾತಿಯಲ್ಲಿ ಕುಳಿತಿದ್ದರು. ಬೋಟ್‌ನ ತಾಂತ್ರಿಕ ತೊಂದರೆಯಿಂದಾಗಿ ರಕ್ಷಿಸಲು ಸಾಧ್ಯವಾಗಿಲ್ಲ. ಸೋಮವಾರ ಹಗಲಿಡೀ ಅವರನ್ನು ಸಮುದ್ರದಲ್ಲಿ ಹುಡುಕಾಡಿದ್ದು, ರಾತ್ರಿ ಉಳ್ಳಾಲದಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಸುನಿಲ್ ಕುವೆಲ್ಲೊ ಸತತ 36 ಗಂಟೆಗಳವರೆಗೆ ಸಮುದ್ರದಲ್ಲಿ ಏಕಾಂಗಿ ಹೋರಾಟ ನಡೆಸಿ, ಮಲ್ಪೆಗೆ ಬಂದು ಸೇರಿದ್ದರು. ಅಲ್ಲಿ ಅವರನ್ನು ರಕ್ಷಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು