ಶುಕ್ರವಾರ, ಫೆಬ್ರವರಿ 3, 2023
18 °C

ಪ್ಲಾಸ್ಟಿಕ್‌ ಸರ್ಜರಿ: ಉಚಿತ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಫ್ರೆಂಡ್ಸ್‌ ವೆಲ್‌ಫೇರ್‌ ಆರ್ಗನೈಸೇಷನ್‌ ವತಿಯಿಂದ ಬನಶಂಕರಿಯ ಗಿರಿನಗರದ ಆವಲಹಳ್ಳಿಯಲ್ಲಿರುವ ಭಗವಾನ್ ಮಹಾವೀರ್ ಜೈನ್‌ ಆಸ್ಪತ್ರೆಯಲ್ಲಿ ಜ.15ರಿಂದ 24ರವರೆಗೆ ಉಚಿತವಾಗಿ ಪ್ಲಾಸ್ಟಿಕ್‌ ಸರ್ಜರಿ ಮಾಡುವ ಶಿಬಿರ ನಡೆಯಲಿದೆ. 

ಜ.15ರಂದು ಬೆಳಿಗ್ಗೆ 8.30ರಿಂದ ರೋಗಿಗಳ ತಪಾಸಣೆ ನಡೆಯಲಿದೆ. ಸುಟ್ಟ ಅಪಘಾತ ಸಂತ್ರಸ್ತರಿಗೆ, ಆ್ಯಸಿಡ್ ಬಾಧಿತರಿಗೆ, ಕೈಗಾರಿಕಾ ಅಥವಾ ವಿದ್ಯುತ್ ಸುಟ್ಟ ಗಾಯದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಶಿಬಿರದಲ್ಲಿ ಜರ್ಮನಿಯ ವೈದ್ಯರ ತಂಡ ಉಚಿತ ಚಿಕಿತ್ಸೆ ನೀಡಲಿದೆ. ಜ. 16ರಿಂದ 24ರ ವರೆಗೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ– 9880307780 ಅಥವಾ 9148741707ಗೆ ಸಂಪರ್ಕಿಸಿ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.