ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಫ್ಟ್‌ ಡೀಡ್‌ ವರ್ಗಾವಣೆ: ಪೂರ್ವಾನ್ವಯ ಸಲ್ಲ

Last Updated 29 ನವೆಂಬರ್ 2021, 16:40 IST
ಅಕ್ಷರ ಗಾತ್ರ

ಬೆಂಗಳೂರು: ‘ಗಿಫ್ಟ್ ಡೀಡ್ ಮೂಲಕ ಮಗಳಿಗೆ ನೀಡಿದ್ದ ಆಸ್ತಿ ವರ್ಗಾವಣೆ‌ ರದ್ದುಗೊಳಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ, ಹೈಕೋರ್ಟ್‌, ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ಹವಣೆ ಮತ್ತು ಕಲ್ಯಾಣ ಕಾಯ್ದೆ-2007ರ ಕಲಂ 23(1) ನಿಬಂಧನೆಗಳನ್ನು, ಕಾಯ್ದೆ ಜಾರಿಯಾದ ನಂತರದ ಅವಧಿಯಲ್ಲಿ ಅನ್ವಯಸಬಹುದೇ ಹೊರತು, ಪೂರ್ವಾನ್ವಯ ಮಾಡಲಾಗದು’ ಎಂದು ಅಭಿಪ್ರಾಯಪಟ್ಟಿದೆ.

ಈ ಸಂಬಂಧ ತುಮಕೂರಿನ ಕಮಲಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ಹವಣೆ ಮತ್ತು ಕಲ್ಯಾಣ ಕಾಯ್ದೆ–2007ರಲ್ಲಿ ಜಾರಿಗೆ ಬಂದಿದೆ. ಆದರೆ, ಅರ್ಜಿದಾರ ಕಮಲಮ್ಮ ತಮ್ಮ ಸ್ಥಿರಾಸ್ತಿಯನ್ನು 2005ರಲ್ಲಿ ಮಗಳಿಗೆ ಗಿಫ್ಟ್ ಡೀಡ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಕಾಯ್ದೆಯ ಕಲಂ 23(1) ನಿಬಂಧನೆಗಳು ಕಾಯ್ದೆ ಜಾರಿಗೆ ಬಂದ ವರ್ಷ 2007ರ ನಂತರದ ಪ್ರಕರಣಗಳಿಗೆ ಅನ್ವಯಿಸುತ್ತದಯೇ ಹೊರತು ಅದಕ್ಕಿಂತ ಮುಂಚಿನ ವ್ಯವಹಾರಗಳಿಗೆ ಅಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಗಿಫ್ಟ್ ಡೀಡ್ ಮತ್ತು ಮಾರಾಟ ರದ್ದುಪಡಿಸಿದ್ದ ಉಪವಿಭಾಗಾಧಿಕಾರಿ ಆದೇಶವನ್ನು ಅಸಿಂಧುಗೊಳಿಸಿರುವ ಏಕಸದಸ್ಯ ನ್ಯಾಯಪೀಠದ ತೀರ್ಪು ಸರಿಯಾಗಿದೆ. ಇದರಲ್ಲಿ ಮಧ್ಯ ಪ್ರವೇಶಿಸುವ ಯಾವ ಅಂಶಗಳೂ ಕಾಣುತ್ತಿಲ್ಲ’ ಎಂದು ವಿಭಾಗೀಯ ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT