ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಬೇತಿ ವಿಮಾನ ಪೂರೈಕೆ ಒಪ್ಪಂದ ಮಾಡಿಕೊಂಡ ಎಚ್‌ಎಎಲ್‌

Last Updated 4 ಫೆಬ್ರುವರಿ 2021, 18:06 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಾಯುಪಡೆಗೆ ತರಬೇತಿ ವಿಮಾನಗಳನ್ನು ಪೂರೈಸುವ ಒಪ್ಪಂದಕ್ಕೆ ಹಿಂದುಸ್ಥಾನ್ ಏರೊನಾಟಿಕ್‌ ಲಿಮಿಟೆಡ್‌ (ಎಚ್‌ಎಎಲ್‌) ಗುರುವಾರ ಸಹಿ ಹಾಕಿತು.

ಏರ್‌ ಶೋ ಸಂದರ್ಭದಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಸಂಬಂಧ ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್‌ ಹಾಗೂ ಏರ್‌ ಮಾರ್ಷಲ್‌ ಸಂದೀಪ್‌ ಸಿಂಗ್‌ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು. ರಕ್ಷಣಾ ಇಲಾಖೆಯ ಪ್ರಧಾನ ನಿರ್ದೇಶಕ (ಸ್ವಾಧೀನ) ವಿ.ಎಲ್. ಕಾಂತರಾವ್ ಇದ್ದರು.

70 ವಿಮಾನಗಳನ್ನು ಪೂರೈಕೆ ಸಂಬಂಧ ಈ ಒಪ್ಪಂದ ನಡೆದಿದೆ. ಎಚ್‌ಎಎಲ್‌ನ ಬೆಂಗಳೂರು ಮತ್ತು ನಾಸಿಕ್ ಘಟಕದಲ್ಲಿ ಈ ವಿಮಾನಗಳ ನಿರ್ಮಾಣ ಕಾರ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT