ಬುಧವಾರ, ಸೆಪ್ಟೆಂಬರ್ 22, 2021
29 °C

ಕೆಪಿಎಸ್‌ಸಿ ಸದಸ್ಯರಾಗಿ ಎಚ್‌.ಜಿ. ಪವಿತ್ರ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯರಾಗಿ ವಾಣಿಜ್ಯ ತೆರಿಗೆ ಇಲಾಖೆಯ (ಆರ್ಥಿಕ ಗುಪ್ತಚರ ಘಟಕ) ಜಂಟಿ ಆಯುಕ್ತ ಎಚ್‌.ಜಿ. ಪವಿತ್ರ ಅವರನ್ನು ನೇಮಿಸಲಾಗಿದೆ.

ಅಧಿಕಾರ ವಿಭಾಗದಿಂದ ಪವಿತ್ರ ಅವರನ್ನು ನೇಮಿಸಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.

ಕೆಪಿಎಸ್‌ಸಿ ಸದಸ್ಯರಾಗಿದ್ದ ಶ್ರೀಕಾಂತ ರಾವ್‌ ಅವರು ಜುಲೈ 21ರಂದು ನಿವೃತ್ತರಾಗಿದ್ದರು. ಕೆಪಿಎಸ್‌ಸಿಯಲ್ಲಿ ಅಧ್ಯಕ್ಷ ಸೇರಿ ಒಟ್ಟು 14 ಸದಸ್ಯರಿದ್ದು, ಪವಿತ್ರ ಅವರ ನೇಮಕದಿಂದ ಎಲ್ಲ ಸ್ಥಾನಗಳು ಭರ್ತಿ ಆದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು