ಮಂಗಳವಾರ, ಮೇ 24, 2022
30 °C

ತಲವಾರ್ ಹಿಡಿಯುವ ಸಂಘಟನೆ ನಿಷೇಧಿಸಿ: ಎಚ್‌ಡಿಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಉತ್ತರ ಕರ್ನಾಟಕದಲ್ಲಿ ಶ್ರೀರಾಮ ಸೇನೆಯಂತಹ ಸಂಘಟನೆಗಳು ವೇದಿಕೆಗಳಲ್ಲೇ ತಲವಾರ್ ಹಂಚುತ್ತಿದ್ದು, ಲವ್‌ ಕೇಸರಿ ಅಭಿಯಾನ ನಡೆಸುವುದಾಗಿ ಹೇಳತೊಡಗಿವೆ. ಇಂತಹ ಸಂಘಟನೆಗಳನ್ನು ರಾಜ್ಯ ಸರ್ಕಾರ ನಿಷೇಧಿಸುತ್ತದೆಯೋ ಇಲ್ಲ ಪ್ರೋತ್ಸಾಹಿಸುತ್ತದೆಯೋ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

‘ಇದು ಕರ್ನಾಟಕ. ಇಲ್ಲಿ ಮತ್ತೊಂದು ಗೋಧ್ರಾ ಹತ್ಯಾಕಾಂಡ ನಡೆಯಲು ಬಿಡುವುದಿಲ್ಲ. ಸರ್ಕಾರ ಇಂತಹ ಸಂಘಟನೆಗಳನ್ನು ನಿಯಂತ್ರಿಸದೇ ಹೋದರೆ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಬಾಗಿಲು ಮುಚ್ಚುವುದು ಖಚಿತ’ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ಕಲ್ಲಂಗಡಿ ಒಡೆದವರ ಮೇಲೆ ಮಾತ್ರವಲ್ಲ, ತಲೆ ಒಡೆದವರ ಮೇಲೂ ನಿಮ್ಮ ಕನಿಕರ ಇರಲಿ’ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‍ಡಿಕೆ, ‘ಇಂತಹ ಹೇಳಿಕೆ ನೀಡಲು ನಾಚಿಕೆ ಆಗಬೇಕು. ನುಗ್ಗಿಕೇರಿ ಘಟನೆಯಲ್ಲಿ ಜೀವ ಹೋಗಿದ್ದರೆ ಯಾರು ಜವಾಬ್ದಾರಿ? ಕಳೆದ ಜನವರಿ–ಫೆಬ್ರುವರಿಯಲ್ಲಿ ರಾಜ್ಯದಲ್ಲಿ 250ಕ್ಕೂ ಕೊಲೆಗಳು ಆಗಿವೆ. ಮೊದಲು ಅವುಗಳ ಕಡೆ ಗಮನ ಕೊಡಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು