ಸೋಮವಾರ, ಡಿಸೆಂಬರ್ 6, 2021
23 °C

Holiday List 2022: ಮುಂದಿನ ವರ್ಷ 16 ದಿನ ಸಾರ್ವತ್ರಿಕ ರಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2022ನೇ ಇಸವಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ 16 ದಿನ ಸಾರ್ವತ್ರಿಕ ರಜೆ ಹಾಗೂ 22 ದಿನ ನಿರ್ಬಂಧಿತ ರಜೆಗಳು ಸಿಗಲಿವೆ. ಮುಂದಿನ ವರ್ಷದ ಸರ್ಕಾರಿ ರಜಾದಿನಗಳ ಪಟ್ಟಿಗೆ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ಸೂಚಿಸಿದೆ. 

ಮೇ 01–ಕಾರ್ಮಿಕ ದಿನಾಚರಣೆ, ಜುಲೈ 10–ಬಕ್ರೀದ್, ಸೆ.25–ಮಹಾಲಯ ಅಮಾವಾಸ್ಯೆ, ಅ.02–ಗಾಂಧಿಜಯಂತಿ, ಅ.09–ವಾಲ್ಮೀಕಿ ಜಯಂತಿ ಮತ್ತು ಈದ್‌ ಮಿಲಾದ್, ಡಿ.25–ಕ್ರಿಸ್‌ಮಸ್‌‌ ಭಾನುವಾರ ಬರಲಿವೆ. ಹೀಗಾಗಿ, ಈ ದಿನಗಳು ಸಾರ್ವತ್ರಿಕ ರಜಾ  ದಿನಗಳ ಪಟ್ಟಿಯಲ್ಲಿಲ್ಲ ಎಂದು ಸರ್ಕಾರದ ಆದೇಶ ಹೇಳಿದೆ.

ಹಾಗೆಯೇ, ಏ.10–ಶ್ರೀರಾಮನವಮಿಯು ಭಾನುವಾರ ಹಾಗೂ ಸೆ.10–ಬ್ರಹ್ಮಶ್ರೀ ನಾರಾಯಣಗುರು ಜಯಂತಿಯು ಎರಡನೇ ಶನಿವಾರ ಮತ್ತು ಡಿ.24–ಕ್ರಿಸ್‌ಮಸ್ ಈವ್‌ ನಾಲ್ಕನೇ ಶನಿವಾರ ಬರಲಿವೆ.
ಹೀಗಾಗಿ, ನಿರ್ಬಂಧಿತ ರಜೆಗಳ ಪಟ್ಟಿಯಲ್ಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು