ಶನಿವಾರ, ಫೆಬ್ರವರಿ 4, 2023
18 °C

ಕ್ರಿಮಿನಾಶಕ ಮಿಶ್ರಿತ ನೀರು ಸೇವನೆ; 15 ಕಾರ್ಮಿಕರು ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು (ಮಂಡ್ಯ ಜಿಲ್ಲೆ): ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿ 15 ಮಂದಿ ಬಳ್ಳಾರಿ ಮೂಲದ ಕಬ್ಬು ಕಟಾವು ಕಾರ್ಮಿಕರು ಅಸ್ವಸ್ಥರಾದ ಘಟನೆ ಮದ್ದೂರು ತಾಲ್ಲೂಕು ಹೊಸಕೊಪ್ಪಲು ಗ್ರಾಮದ ಬಳಿ ಸೋಮವಾರ ನಡೆದಿದೆ.

ಕೊಪ್ಪ ಹೋಬಳಿ ವ್ಯಾಪ್ತಿಯ ಬಳ್ಳೇಕೆರೆ ಕ್ಯಾಂಪ್‌ನಲ್ಲಿ 30 ಮಂದಿ ಕಾರ್ಮಿಕರು ವಾಸ್ತವ್ಯ ಹೂಡಿದ್ದರು. ಕಬ್ಬು ಕಟಾವು ಮಾಡಲು ಹೊಸಕೊಪ್ಪಲು ಬಳಿಯ ಗದ್ದೆಗೆ ತೆರಳಿದ್ದರು. ರೈತರೊಬ್ಬರು ನೀರಿನಲ್ಲಿ ಕ್ರಿಮಿನಾಶಕ ಮಿಶ್ರಣ ಮಾಡಿ ಬೆಳೆಗೆ ಸಿಂಪಡಣೆ ಮಾಡಲು ಡ್ರಮ್‌ ನಲ್ಲಿ ತುಂಬಿಸಿ ಇಟ್ಟಿದ್ದರು. ಅದನ್ನು ಕುಡಿಯುವ ನೀರು ಎಂದು ತಿಳಿದ ಕಾರ್ಮಿಕರು ಸೇವನೆ ಮಾಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಬಂದ ರೈತರು ನೀರು ಕುಡಿಯದಂತೆ ಎಚ್ಚರಿಸಿದ್ದಾರೆ, ಆದರೆ, ಆ ವೇಳೆಗಾಗಲೇ 15 ಮಂದಿ ನೀರು ಕುಡಿದಿದ್ದರು. ನಂತರ ವಾಂತಿ ಮಾಡಿಕೊಂಡ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಆಂಬುಲೆನ್ಸ್‌ ಕರೆಸಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು