ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿಗೆ ಹೋಗುವುದರೊಳಗೆ ದಲಿತರೊಬ್ಬರನ್ನು ಸಿಎಂ ಮಾಡುವೆ: ಕುಮಾರಸ್ವಾಮಿ

Last Updated 14 ಏಪ್ರಿಲ್ 2022, 18:46 IST
ಅಕ್ಷರ ಗಾತ್ರ

ಮಳವಳ್ಳಿ(ಮಂಡ್ಯ): ‘ನಾನು ಮಣ್ಣಿಗೆ ಹೋಗುವುದರೊಳಗಾಗಿ ಜೆಡಿಎಸ್ ಪಕ್ಷದಿಂದ ‌ರಾಜ್ಯದಲ್ಲಿ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಳವಳ್ಳಿಯಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆ ಯಲ್ಲಿ ಮಾತನಾಡಿ, ‘ಅನೇಕ ದಲಿತ ನಾಯಕರಿಗೆ ಪಕ್ಷದಲ್ಲಿ, ಸರ್ಕಾರದ ಮಟ್ಟದಲ್ಲಿ ಜೆಡಿಎಸ್‌ ಉನ್ನತ ಹುದ್ದೆಗಳನ್ನು ನೀಡಿದೆ. ಮೀಸಲಾತಿ ಇಲ್ಲದ ಸಂದರ್ಭದಲ್ಲೇ, ಮೊದಲ ಬಾರಿಗೆ ಹಾಸನ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದ ಎಚ್‌.ಡಿ.ರೇವಣ್ಣ ಅವರನ್ನು ಬಿಟ್ಟು, ಎಂ.ಎ ಪದವೀಧರರಾಗಿದ್ದ ದಲಿತ ಅಭ್ಯರ್ಥಿಯನ್ನು ಎಚ್.ಡಿ.ದೇವೇಗೌಡರು ಅಧ್ಯಕ್ಷರನ್ನಾಗಿಸಿದ್ದರು’ ಎಂದರು.

‘ನನ್ನ ಬಳಿಗೆ ರಾಜ್ಯದ ವಿವಿಧ ಮೂಲೆಗಳಿಂದ ಬರುವ ಜನರ ಜಾತಿ, ಧರ್ಮದ ಬಗ್ಗೆ ಕೇಳದೆ, ನಿಮ್ಮ ಕಷ್ಟ ವೇನು ಎಂದಷ್ಟೇ ಕೇಳುತ್ತೇನೆ. ಐದು ವರ್ಷ ಅಧಿಕಾರ ಕೊಟ್ಟರೆ ಜನ ಮೆಚ್ಚುವ ಕಾರ್ಯಕ್ರಮಗಳನ್ನು ರೂಪಿಸುವೆ. ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವೆ. ಆಗದಿದ್ದರೆ ಪಕ್ಷವನ್ನೇ ವಿಸರ್ಜಿಸುವೆ. ಮೈತ್ರಿ ರಾಜಕಾರಣ ಖಂಡಿತಾ ಬೇಡ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT