ಶನಿವಾರ, ಮೇ 15, 2021
23 °C

‘ಮೈಲಾರ್ಡ್‘ ಪದ ಬಳಕೆ ತಪ್ಪಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮೈಲಾರ್ಡ್’ ಅಥವಾ ‘ಯುವರ್ ಲಾರ್ಡ್‌ ಶಿಪ್’ ಎಂಬ ಅತಿಯಾದ ಗೌರವಯುತ ಪದಗಳ ಬಳಕೆ ತಪ್ಪಿಸಿ ‘ಸರ್’ ರೀತಿಯ ಪದಗಳ್ನು ಬಳಕೆ ಮಾಡುವಂತೆ ವಕೀಲರಿಗೆ ಹೈಕೋರ್ಟ್‌ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಮನವಿ ಮಾಡಿದರು.

‘ನ್ಯಾಯಾಲಯ ಅಥವಾ ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡುವಾಗ ಭಾರತೀಯರ ವಿಧಾನಗಳನ್ನು ಅನುಸರಿಸುವುದು ಸೂಕ್ತ’ ಎಂದು ಮೌಖಿಕವಾಗಿ ತಿಳಿಸಿದರು.

ವಸಾಹತುಶಾಹಿ ಈ ಅಭ್ಯಾಸದ ಬಗ್ಗೆ ಪರಿಶೀಲನೆ ಕೋರಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ಮುಂದೆ ಹಲವು ಅರ್ಜಿಗಳು ಇವೆ. ರಾಜಸ್ಥಾನ ಹೈಕೋರ್ಟ್‌ ಮತ್ತು ಕೋಲ್ಕತ್ತ ಹೈಕೋರ್ಟ್‌ಗಳು ‘ಮೈಲಾರ್ಡ್‌’ ಅಥವಾ ‘ಯುವರ್ ಲಾರ್ಡ್ ಶಿಪ್‌’ ಎಂದು ನ್ಯಾಯಾಧೀಶರನ್ನು ಸಂಬೋಧಿಸುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದವು. ಇದು ಸಂವಿಧಾನ ಪ್ರತಿಪಾದಿಸಿರುವ ಸಮಾನತೆಯ ಸಂದೇಶವನ್ನು ಗೌರವಿಸುವ ನಿರ್ಧಾರ ಎಂದು ರಾಜಸ್ಥಾನ ಹೈಕೋರ್ಟ್ ತಿಳಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.