ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

90 ನ್ಯಾಯಾಧೀಶರಿಗೆ ‘ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ’

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಾರ್ಷಿಕ ಪ‍್ರಶಸ್ತಿ ಘೋಷಣೆ
Last Updated 17 ಜನವರಿ 2023, 16:34 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರವು 2019–20, 2020–21ನೇ ಸಾಲಿನ ‘ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ’ ಘೋಷಣೆ ಮಾಡಿದ್ದು, 90 ನ್ಯಾಯಾಧೀಶರು ಸೇರಿ 120 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಒಳಗೊಂಡಿದೆ. ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ತೀರ್ಪನ್ನು ದಾಖಲಿಸುವ ಕಾರ್ಯ ಈಗಾಗಲೇ ನಡೆದಿದೆ. ಕನ್ನಡದಲ್ಲಿ ತೀರ್ಪು ನೀಡುವ ನ್ಯಾಯಾಧೀಶರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ತೀರ್ಪು ನೀಡಿದ ನ್ಯಾಯಾಧೀಶರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಮಿತಿ ಗುರುತಿಸಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ತಿಳಿಸಿದ್ದಾರೆ.

ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಅರ್ಜಿ ಸಲ್ಲಿಸುವ, ವಾದ ಮಂಡಿಸುವ ವಕೀಲರನ್ನು ಅಭಿಯೋಜನಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮೂಲಕ ಗುರುತಿಸಿ, ಗೌರವಿಸಲಾಗುತ್ತಿದೆ. 2019–20, 2020–21ನೇ ಸಾಲಿನಲ್ಲಿ ಕನ್ನಡದಲ್ಲಿ ವಾದ ಮಂಡಿಸಿದ 12 ಸರ್ಕಾರಿ ಅಭಿಯೋಜಕರು ಹಾಗೂ 18 ವಕೀಲರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕೋರ್ಟ್‌ಗಳು ಕನ್ನಡದಲ್ಲಿ ತೀರ್ಪು ನೀಡಿದರೆ ಜನರು ನ್ಯಾಯದಾನವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ತೀರ್ಪಿನ ಸಾಧಕ-ಬಾಧಕಗಳ ಬಗ್ಗೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಆಂಗ್ಲ ಭಾಷೆಯಲ್ಲಿ ತೀರ್ಪು ಹೊರಬಿದ್ದಾಗ ಅದನ್ನು ಅರ್ಥೈಸಿಕೊಳ್ಳುವುದು ಕಷ್ಟ. ಹೈಕೋರ್ಟ್‌ನಲ್ಲಿನ ದೈನಂದಿನ ಆಡಳಿತದ ವ್ಯವಹಾರ ಕನ್ನಡದಲ್ಲಿಯೇ ನಡೆಯಬೇಕು. ಇದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಕಾರ್ಯೋನ್ಮುಕವಾಗಬೇಕು ಎಂದು ಪ್ರಾಧಿಕಾರದ ಕಾರ್ಯದರ್ಶಿ ಆಗ್ರಹಿಸಿದ್ದಾರೆ.

ಪ್ರಾಧಿಕಾರವು ಇದೇ 22ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಶಸ್ತಿ ‍ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾರಂಭ ಉದ್ಘಾಟಿಸಲಿದ್ದು, ಹೈಕೋರ್ಟ್ ನ್ಯಾಯಮೂರ್ತಿ ಜಿ. ನರೇಂದರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ನ್ಯಾಯಾಧೀಶರು

ರಾಘವೇಂದ್ರ ವೈಜನಾಥ್, ಮಂಜುನಾಥ ಪ್ರಭಾಕರ ಪಾನಘಂಟಿ, ರೇಷ್ಮ ಎಚ್.ಕೆ., ಕೋಟೆಪ್ಪ ಕಾಂಬ್ಳೆ, ಜೈ ಶಂಕರ್ ಜೆ., ಪ್ರೇಮ್‌ಕುಮಾರ್, ನಾಗೇಶ ಸಿ., ಕಿಶನ್ ಬಸವಣ್ಣಿ ಮಾಡಲಗಿ, ಯೋಗೇಶ್, ರೇಖಾ ಎಚ್.ಸಿ., ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಕಾಯಿ, ಲಕ್ಷ್ಮಿ ಎಂ.ವಿ., ರವೀಂದ್ರಕುಮಾರ್ ಬಿ. ಕಟ್ಟೀಮನಿ, ಸಂದೇಶ ಕೆ., ಗಿರೀಶ್ ಚಟ್ನಿ, ಅರುಣ ಚೌಗುಲೆ, ಶಂಭುಲಿಂಗಯ್ಯ ಮೂಡಿಮಠ, ನೇಮಚಂದ್ರ, ಯತೀಶ ಆರ್., ನಾಗೇಶ ನಾಯ್ಕ್, ಅಶ್ವಿನಿ ಕೋರೆ, ಜಿನ್ನಪ್ಪಾ ಚೌಗಲಾ, ವೀರೇಶ್ ಕುಮಾರ್ ಸಿ.ಕೆ., ಭೀಮಪ್ಪ ಪೋಳ, ಅಪ್ಪಾಸಾಬ ರಾಮಪ್ಪ ನಾಯಿಕ, ಭಾಗ್ಯಲಕ್ಷ್ಮಿ, ಚೇತನಾ ಎಸ್.ಎಫ್., ಸೂರ್ಯನಾರಾಯಣ ಎಸ್., ಶೈಲಾ ಎಸ್.ಎಂ., ನಳಿನ ಎಸ್.ಸಿ. ಅವರು 2019–20ನೇ ಸಾಲಿಗೆ ಆಯ್ಕೆಯಾಗಿದ್ದಾರೆ.

ಸುಮಂಗಲಾ ಎಸ್. ಬಸವಣ್ಣೋರ್, ಸರೋಜಾ ಎಂ., ರೂಪಾ ರಾಮರಾವ್ ಕುಲಕರ್ಣಿ, ನಾಗೇಶ್ ಪಾಟೀಲ, ಜಿತೇಂದ್ರನಾಥ್ ಸಿ.ಎಸ್., ಲತಾಶ್ರೀ ಬಿ.ವಿ., ರೇಣುಕಾ ದೇವಿದಾಸ ರಾಯ್ಕರ್, ವಿಶ್ವನಾಥ ಯಮಕನಮರಡಿ, ಲೋಕೇಶ, ಶಿವಕುಮಾರ ಜಿ.ಜೆ., ಸವಿತಾ ಪಿ.ಆರ್., ಲಕ್ಷ್ಮೀಶ ಶರ್ಮ ಎನ್., ಅನಿಲ್‌ಪ್ರಕಾಶ್ ಎಂ.ಪಿ, ಕಿಶೋರ್ ಕುಮಾರ್ ಕೆ.ಎನ್., ಆನಂದ್ ಎಸ್. ಕರಿಯಮ್ಮನವರ, ನಂದಿನಿ ಎಂ.ಎನ್., ಗಾಯಿತ್ರಿ ಎಸ್. ಕಾಟೆ, ದೀಪು ಎಂ.ಟಿ., ಚಿದಾನಂದ ಬಡಿಗೇರ, ಶೃತಿಶ್ರೀ ಎಸ್., ಶ್ರೆಯಾಂಶ ದೊಡ್ಡಮನಿ, ಲಕ್ಷ್ಮೀಬಾಯಿ, ಅರವಿಂದ್ರ ಬಿ.ಸಿ., ಆದಿತ್ಯ ಆರ್. ಕಲಾಲ್, ತಿಮ್ಮಯ್ಯ ಜಿ., ಸಂಜುಕುಮಾರ್ ಪಾಚ್ಛಾಪುರೆ, ರಘುನಾಥ ಗೌಡ ಕೆ.ಟಿ., ರೋಹಿಣಿ ಡಿ. ಬಸಾಪುರ, ಪ್ರತಿಭಾ ಡಿ.ಎಸ್., ಪದ್ಮ ಎಂ., ಕಿಶೋರ್ ಕುಮಾರ್ ಎಂ., ಈರಪ್ಪ ಢವಳೇಶ್ವರ್, ಮೋಹನ ಸದಾಶಿವ ಪೋಳ, ಕೋನಪ್ಪ ಎನ್.ವಿ., ಅಬ್ದುಲ್ ರಹಿಮಾನ್ ಎ. ಮುಲ್ಲಾ, ರಾಮಮೂರ್ತಿ ಎನ್., ಶಿವಕುಮಾರ್ ಆರ್., ನಾಗರತ್ನಮ್ಮ, ಲೋಕೇಶ ಸಿ.ಎನ್., ಕಿರಣ್ ಎಸ್.ಪಿ., ಕನ್ನಿಕಾ ಎಂ.ಎಸ್., ಸ್ಮಿತಾ ನಾಗಲಾಪುರ, ಹಾಜಿಹುಸೇನಸಾಬ ಯಾದವಾಡ, ಶಶಿಕಲಾ ಜಿ., ಗೌರಮ್ಮ, ಸಣ್ಣಹನಮಗೌಡ, ಪಾರ್ವತಮ್ಮ ಬಿ., ರೋಹಿಣಿ ಡಿ. ಬಸಾಪೂರ, ಗುರುಪ್ರಸಾದ್ ಸಿ., ಪ್ರತಿಭಾ ಡಿ.ಎಸ್., ರಾಧಾ ಎಸ್., ಮಾದೇಶ ಎಂ.ವಿ., ಸತೀಶ ಬಿ., ಶ್ರೀನಾಥ ಜೆ.ಎನ್., ‌ಅಂಬಣ್ಣ ಕೆ., ಪ್ರತಾಪ್ ಕುಮಾರ್ ಎನ್., ಸೈಯ್ಯದ್ ಮೋಹಿದ್ದಿನ, ಕೆ. ಗೋಪಾಲಕೃಷ್ಣ, ಗಣೇಶ ಎನ್. ಹಾಗೂ ಸುಜಾತ ಎಚ್. ಅವರು 2020–21ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ಸರ್ಕಾರಿ ವಕೀಲರು

ಕೆ. ಕೆಂಚಪ್ಪ, ರಾಜು ಪೂಜಾರಿ, ಅಣ್ಣಪ್ಪ ಜಟ್ಟಿ ನಾಯ್ಕ, ತನುಜಾ ಬಿ. ಹೊಸಪಟ್ಟಣ, ಬಿ. ಪ್ರಕಾಶ್ಚಂದ್ರ ಶೆಟ್ಟಿ, ಸಿದ್ಧಾರೂಡ ಎಂ. ಗೆಜ್ಜಿಹಳ್ಳಿ, ಶಾಂತಿ ಬಾಯಿ, ಪ್ರಾಣೇಶ ಭರತನೂರ, ಪ್ರಶಾಂತ್ ಶೇಖರ ತೋರಗಲ್, ಶರಣಗೌಡ ವಿ. ಪಾಟೀಲ, ಕೆ.ಎಚ್. ಶ್ರೀಮತಿ, ಚೆನ್ನಪ್ಪ ಗು. ಹರಸೂರ

ಪ್ರಶಸ್ತಿಗೆ ಆಯ್ಕೆಯಾದ ವಕೀಲರು

ಲಕ್ಷ್ಮಪ್ಪ ನಿಂಗಪ್ಪ ಬನದ, ರವೀಂದ್ರನಾಥ, ಗಂಗಾಧರ ಗುರಪ್ಪ ಮತ್ತಿಕಟ್ಟೆ, ಶಾಂತಿಪ್ರಸಾದ್ ಹೆಗ್ಡೆ, ಶ್ರೀಕಾಂತ್ ಯಲ್ಲಪ್ಪ ಅವಧೂತ್, ‌ಚಂದ್ರಶೇಖರ ಬಿ., ಪ್ರವೀಣ್ ಎಸ್. ಪಲ್ಲೇದ್, ಶಿವಾನಂದ ಕೆ.ಜಿ., ರಾಜು ಆರ್. ಕೋಟಿ, ವಿ.ಆರ್. ನಟಶೇಖರ, ಪಾಟೀಲ್ ಸಿದ್ದರಾಮೇಶ್ವರ್ ಮಲ್ಲನಗೌಡ, ಗಂಗಾಧರಪ್ಪ ಜೆ.ಕೆ., ಎಚ್.ಆರ್. ಪಟವರ್ಧನ್, ಲಕ್ಷ್ಮೀನಾರಾಯಣ ಕೆ., ಬಿ.ಪಿ. ಪುಟಾಣಿ, ಭೀಮಸೇನ ಬಾಳಪ್ಪ ಬಾಗಿ, ಎಸ್.ಎಸ್. ಷಣ್ಮುಖ, ಕಾಲೇಸಾ ಮಾ. ನದಾಫ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT