ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ನಾಡು, ನುಡಿಯ ಹಿತಾಸಕ್ತಿ ಎಂದರೆ ಬಿಜೆಪಿಗೆ ಸದಾ ಅಸಡ್ಡೆ: ಕಾಂಗ್ರೆಸ್‌ ಕಿಡಿ

Last Updated 25 ಸೆಪ್ಟೆಂಬರ್ 2022, 8:40 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ನಾಡು, ನುಡಿಯ ಹಿತಾಸಕ್ತಿ ಎಂದರೆ ಬಿಜೆಪಿಯವರಿಗೆ ಸದಾ ಅಸಡ್ಡೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.

‘ಕನ್ನಡವನ್ನು ಶತ್ರುಪಕ್ಷದಂತೆ ಕಾಣುವ 40 ಪರ್ಸೆಂಟ್ ಬಿಜೆಪಿ ಸರ್ಕಾರ ಪಿತೃಪಕ್ಷದ ನೆಪ ಹೇಳುತ್ತಿದೆ. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳೇ ಇಲ್ಲ. ಹಣ ಬಿಡುಗಡೆಯೂ ಆಗಿಲ್ಲ. ಬೊಮ್ಮಾಯಿ ಅವರೇ, ಇದರಲ್ಲೂ 40 ಪರ್ಸೆಂಟ್ ಕಮಿಷನ್ ಚೌಕಾಸಿ ನಡೆಯುತ್ತಿದೆಯೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಕಂಪ್ಯೂಟರ್ ಸಾಕ್ಷರತಾ ಕೇಂದ್ರ ಸ್ಥಾಪಿಸುತ್ತೇವೆ’ಎಂದಿದ್ದ ಬಿಜೆಪಿ ಈಗ ತಾವು ಸ್ಥಾಪಿಸಿದ ಕಂಪ್ಯೂಟರ್ ಕೇಂದ್ರಗಳನ್ನು ತೋರಿಸಲು ಸಾಧ್ಯವೇ? ಬಿಜೆಪಿಯವರು ಹಳ್ಳಿ ಹಳ್ಳಿಗೂ ತಲುಪಿಸಿದ್ದು ಭ್ರಷ್ಟಾಚಾರವನ್ನು ಮಾತ್ರ! ಬಿಜೆಪಿಗರೇ, ನಿಮ್ಮ ಪ್ರಣಾಳಿಕೆ ಅಂದ್ರೆ ಸುಳ್ಳಿನ ಗಂಟು ಅಲ್ಲವೇ’ ಎಂದು ಕಾಂಗ್ರೆಸ್ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT