ಶನಿವಾರ, ಮೇ 28, 2022
21 °C

Karnataka Covid Update: 24 ಗಂಟೆಯಲ್ಲಿ 34,047 ಮಂದಿಗೆ ಸೋಂಕು ದೃಢ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಸಂಜೆಯ ವೇಳೆಗೆ ಕೊನೆಗೊಂಡಂತೆ ಕಳೆದ 24 ತಾಸಿನಲ್ಲಿ 34,047 ಮಂದಿಗೆ ಕೋವಿಡ್ ದೃಢಪಟ್ಟಿವೆ.

ಕೊರೊನಾ ಸೋಂಕು ಅತಿ ಹೆಚ್ಚು ವರದಿಯಾಗುತ್ತಿರುವ ಬೆಂಗಳೂರಿನಲ್ಲಿ 21,071 ಮಂದಿಯಲ್ಲಿ ಕೋವಿಡ್ ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆಯು ತಿಳಿಸಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,97,982ಕ್ಕೆ ಏರಿಕೆಯಾಗಿದ್ದು, 24 ತಾಸಿನಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್ ಸೋಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 38,431ಕ್ಕೆ ತಲುಪಿದೆ.

 

 

 

ಆಸ್ಪತ್ರೆಯಿಂದ 5,902 ಮಂದಿ ಬಿಡುಗಡೆ ಹೊಂದಿದ್ದು, ಇದುವೆರೆಗೆ 29,83,645 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

 

ಕೋವಿಡ್ ದೃಢ ಪ್ರಮಾಣ ಶೇ 19.29ಕ್ಕೆ ತಲುಪಿದೆ. ಸೋಂಕಿನಿಂದ ಮೃತಪಟ್ಟವರ ಶೇಕಡಾವಾರು ಪ್ರಮಾಣ 0.03 ಆಗಿದೆ.

ಬೆಂಗಳೂರಿನಲ್ಲಿ ಭಾನುವಾರ ಐದು ಮಂದಿ ಮೃತಪಟ್ಟಿದ್ದಾರೆ. 3,978 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇನ್ನುಳಿದಂತೆ ಮೈಸೂರು 1892, ತುಮಕೂರು 1373, ಹಾಸನದಲ್ಲಿ 1171, ಬೆಂಗಳೂರು ಗ್ರಾಮಾಂತರ 722, ದಕ್ಷಿಣ ಕನ್ನಡ 782, ಮಂಡ್ಯ 709, ಧಾರವಾಡ 634, ಉಡುಪಿ 591, ಕಲಬುರಗಿ 562, ಬಳ್ಳಾರಿ 566, ಕೋಲಾರ 552, ಬೆಳಗಾವಿ 468 ಹಾಗೂ ಉತ್ತರ ಕನ್ನಡದಲ್ಲಿ 447 ಸೋಂಕು ಪ್ರಕರಣಗಳು ದಾಖಲಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು