ಗುರುವಾರ , ಸೆಪ್ಟೆಂಬರ್ 23, 2021
22 °C

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ LIVE - ಫಲಿತಾಂಶ ಒಪ್ಪದವರಿಗೆ ಆಗಸ್ಟ್ 19ರಿಂದ ಪರೀಕ್ಷೆ

Published:
Updated:
2020–21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ಪ್ರಕಟಿಸಿದ್ದು, ಲೇಟೆಸ್ಟ್ ಅ‍ಪ್‌ಡೇಟ್ಸ್ ಇಲ್ಲಿ ಲಭ್ಯ.
 • 04:47 pm

  ಫಲಿತಾಂಶವನ್ನು https://karresults.nic.in/ ತಾಣದಲ್ಲಿಯೂ ನೋಡಬಹುದು

 • 04:28 pm

  ಫಲಿತಾಂಶ ಒಪ್ಪದವರಿಗೆ ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ಪರೀಕ್ಷೆ ನಡೆಯಲಿದೆ

 • 04:27 pm

  ಫ್ರೆಶರ್ಸ್ ಫಲಿತಾಂಶ ತಿರಸ್ಕರಿಸಿ ಮತ್ತೆ ಪರೀಕ್ಷೆ ತೆಗೆದುಕೊಂಡರೆ ಅವರನ್ನು ಫ್ರೆಶರ್ಸ್ ಎಂದೇ ಪರಿಗಣಿಸಲಾಗುವುದು.

 • 04:27 pm

  ಫಲಿತಾಂಶದಿಂದ ತೃಪ್ತರಾಗದವರಿಗೆ ಆಗಸ್ಟ್ ತಿಂಗಳಲ್ಲಿ ಮತ್ತೆ ಪರೀಕ್ಷೆ

 • 04:25 pm

  ಫಲಿತಾಂಶದ ಬಗ್ಗೆ ಅಸಮಾಧಾನ ಇದ್ದವರು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಜುಲೈ 30 ಕಡೇ ದಿನಾಂಕ

 • 04:23 pm

  600ಕ್ಕೆ 600 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ – 2,239

 • 04:19 pm

  ಗ್ರಾಮೀಣ ಭಾಗದಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 1,47,594. ಇದರಲ್ಲಿ 14,243 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

 • 04:16 pm

  ಎಲ್ಲಾ ರಿಪೀಟರ್ಸ್‌ಗಳೂ ಪಾಸ್: ಅವರಿಗೆ ಕನಿಷ್ಠ ಉತ್ತೀರ್ಣ ಅಂಕ ನೀಡಲಾಗಿದೆ

 • 04:13 pm

  4,50,706 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ಮೊದಲ ಶ್ರೇಣಿಯಲ್ಲಿ ಪಾಸ್

 • 04:10 pm

  ಎಸ್ಸೆಸ್ಸೆಲ್ಸಿಯ ಶೇ 45, ಪ್ರಥಮ ಪಿಯುಸಿಯ ಶೇ 45 ಮತ್ತು ದ್ವಿತೀಯ ಪಿಯುಸಿಯ ಶೇ 10ರಷ್ಟು ಶೈಕ್ಷಣಿಕ ಚಟುವಟಿಕೆ ಅಂಕಗಳನ್ನು ಪರಿಗಣಿಸಿ ಈ ಫಲಿತಾಂಶ ನಿರ್ಧರಿಸಲಾಗಿದೆ.

 • 04:07 pm

  ಇನ್ನು 15 ನಿಮಿಷಗಳಲ್ಲಿ ನೋಂದಾಯಿತ ಮೊಬೈಲ್ ದೂರವಾಣಿ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಫಲಿತಾಂಶ ದೊರೆಯಲಿದೆ: ಸುರೇಶ್‌ ಕುಮಾರ್

 • 03:58 pm

  2020–21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುತ್ತಿರುವ ಸಚಿವ ಎಸ್.ಸುರೇಶ್‌ ಕುಮಾರ್

 • 03:56 pm

  ಫೇಸ್‌ಬುಕ್‌ ಲೈವ್ ಮೂಲಕವೂ ಫಲಿತಾಂಶ ವೀಕ್ಷಿಸಿ: ಸಚಿವ ಸುರೇಶ್‌ ಕುಮಾರ್ ಸಂದೇಶ

 • 03:30 pm

  ವಿದ್ಯಾರ್ಥಿಗಳ ರ‍್ಯಾಂಕ್‌ ಪಟ್ಟಿ ಘೋಷಣೆ ಇಲ್ಲ

 • 03:30 pm

  ಈ ಬಾರಿ ಪರೀಕ್ಷೆ ಇಲ್ಲದೆ, ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ನೀಡಿದ ಅಂಕಗಳ ಆಧಾರದಲ್ಲಿ ಫಲಿತಾಂಶ

 • 03:30 pm

  ಮಲ್ಲೇಶ್ವರಂನ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಭಾಂಗಣದಲ್ಲಿ ಫಲಿತಾಂಶ ಪ್ರಕಟಿಸಲಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್

 • 03:30 pm

  ಇಂದು (ಮಂಗಳವಾರ, ಜುಲೈ 20) ಸಂಜೆ 4 ಗಂಟೆಗೆ ಪ್ರಕಟವಾಗಲಿರುವ ಫಲಿತಾಂಶ.