ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 6,185 ಅನಧಿಕೃತ ಕಟ್ಟಡಗಳು

ಕೋರ್ಟ್ ಆದೇಶದ ನಂತರವೇ 1,242 ಅನಧಿಕೃತ ಕಟ್ಟಡ ನಿರ್ಮಾಣ
Last Updated 4 ಆಗಸ್ಟ್ 2021, 18:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ನಿರ್ಮಿಸಿರುವ ಧಾರ್ಮಿಕ ಹಾಗೂ ಇತರ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು‌ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ನಂತರದ ವರ್ಷಗಳಲ್ಲಿಯೇ ರಾಜ್ಯದಾದ್ಯಂತ 1,242 ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿವೆ.

ಸಾರ್ವಜನಿಕ ಕಾಮಗಾರಿಗೆ ಹಾಗೂ ವಾಹನಗಳ ಸಂಚಾ ರಕ್ಕೆ ಸಮಸ್ಯೆಯಾಗುತ್ತದೆ ಎಂದು 2009ರಲ್ಲಿ ಸುಪ್ರೀಂ ಕೋರ್ಟ್ ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶ ನೀಡಿತ್ತು. ಆ ವೇಳೆ ಸಮೀಕ್ಷೆ ನಡೆಸಿದಾಗ 5,688 ಕಟ್ಟಡಗಳು ಅನಧಿಕೃತವಾಗಿ ನಿರ್ಮಿಸಿರುವುದು ದಾಖಲಾಗಿತ್ತು. ಕೋರ್ಟ್ ಆದೇಶದ ನಂತರದ ವರ್ಷಗಳಲ್ಲೂ ಬಹುತೇಕ ಜಿಲ್ಲೆಗಳಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿದ್ದು, ಈಗ ಅವುಗಳ ಸಂಖ್ಯೆ 6,185ಕ್ಕೆ ಏರಿಕೆಯಾಗಿವೆ.

ಸುಪ್ರೀಂ ಕೋರ್ಟ್ ಆದೇಶ ನೀಡಿ 12 ವರ್ಷ ಗಳು ಕಳೆದಿವೆ. 2020ರ ಡಿಸೆಂಬರ್‌ನಲ್ಲಿಯೂ ಹೈಕೋರ್ಟ್ ಕಟ್ಟಡ ಗಳ ತೆರವಿಗೆ ನಿರ್ದೇಶನ ನೀಡಿದೆ. ನ್ಯಾಯಾಂಗ ನಿಂದನೆಯ ತೂಗುಗತ್ತಿ ತಪ್ಪಿಸಿಕೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತೆರವು ಕಾರ್ಯಾಚರಣೆಗೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ತೆರವಿಗೆ ಕಾರ್ಯಯೋಜನೆ ಸಿದ್ಧಪಡಿಸಿ, ಕಾರ್ಯಾಚರಣೆಗೆ ಮುಂದಾಗಬೇಕು ಎಂದು ನಿರ್ದೇಶಿಸಿದ್ದಾರೆ.

ಕೆಲವು ಜಿಲ್ಲೆಗಳ ನಗರ, ಗ್ರಾಮಾಂತರ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ 2,887 ಸಣ್ಣಪುಟ್ಟ ಗುಡಿ, ಕಟ್ಟೆಗಳನ್ನಷ್ಟೇ ತೆರವು ಮಾಡಲಾಗಿದೆ. ಆದರೆ, ದೊಡ್ಡ ಧಾರ್ಮಿಕ ಕೇಂದ್ರಗಳು ಹಾಗೂ ಬೃಹತ್ ಕಟ್ಟಡಗಳು ಇನ್ನೂ ಹಾಗೆಯೇ ಇವೆ. ಅತಿ ಹೆಚ್ಚು ಅನಧಿಕೃತ ಕಟ್ಟಡಗಳು ದಕ್ಷಿಣ ಕನ್ನಡ, ಶಿವಮೊಗ್ಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿವೆ. ರಾಮ ನಗರ, ಕೊಡಗು, ದಾವಣಗೆರೆ ಜಿಲ್ಲೆಗಳಲ್ಲಿ ಅತಿ ಕಡಿಮೆ ಇವೆ. ಸಮೀಕ್ಷೆ ಪ್ರಕಾರ ಒಂದೇ ಒಂದು ಅಕ್ರಮ ಕಟ್ಟಡಗಳಿಲ್ಲದ ಬಳ್ಳಾರಿ ಜಿಲ್ಲೆಯಲ್ಲಿ, ಸುಪ್ರೀಂ ಕೋರ್ಟ್‌ ಆದೇಶದ ನಂತರವೇ 410 ಅಕ್ರಮ ಕಟ್ಟಗಳು ತಲೆ ಎತ್ತಿದ್ದವು. ಅವೆಲ್ಲವನ್ನೂ ಈಗ ತೆರವುಗೊಳಿಸಲಾಗಿದೆ. ಕೊಪ್ಪಳದಲ್ಲಿ ನಿರ್ಮಾಣವಾಗಿರುವ 262 ಕಟ್ಟಡಗಳಲ್ಲಿ 212 ತೆರವು ಮಾಡಲಾಗಿದೆ.

ಜಿಲ್ಲಾಧಿಕಾರಿಗಳು ತಹಶೀಲ್ದಾರ್, ಪಟ್ಟಣ ಹಾಗೂ ಪುರಸಭೆ ಮುಖ್ಯಾಧಿ ಕಾರಿಗಳಿಗೆ ಪತ್ರ ಬರೆದು ಒತ್ತುವರಿ ತೆರವುಗೊಳಿಸಿ ನ್ಯಾಯಾಲಯದ ಆದೇಶ ಪಾಲಿಸಲು ಸೂಚಿಸಿದ್ದಾರೆ. ಮಹಾನಗರ ಪಾಲಿಕೆಗಳು ಸಹದೊಡ್ಡ ಕಟ್ಟಡಗಳ ಮಾಲೀಕರಿಗೆ ತೆರವು ಮಾಡಲು ಸೂಚಿಸ ಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT