ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ ಅಂತ್ಯಕ್ಕೆ ರಾಜ್ಯದಲ್ಲಿ ನಿತ್ಯ 20ರಿಂದ 70 ಸಾವಿರ ಮಂದಿ ಆಸ್ಪತ್ರೆಗೆ– ವರದಿ

Last Updated 13 ಜನವರಿ 2022, 5:06 IST
ಅಕ್ಷರ ಗಾತ್ರ

ಬೆಂಗಳೂರು: ಜನವರಿ ಅಂತ್ಯ ಅಥವಾ ಫೆಬ್ರವರಿ 2ರ ವೇಳೆಗೆ ರಾಜ್ಯದಲ್ಲಿದಿನಕ್ಕೆ 20,000 ರಿಂದ 70,000 ಮಂದಿ ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ ಎಂದು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧಕರು ನಡೆಸಿದ ಹೊಸ ಅಧ್ಯಯನವು ತಿಳಿಸಿದೆ.

ಅಂತೆಯೇ, ಐಸಿಯು ಹಾಸಿಗೆಯ ಅಗತ್ಯತೆ ಬಗ್ಗೆ ಮಾಡಿದ ಸಂಶೋಧನೆಯಲ್ಲಿ ಫೆಬ್ರವರಿ 2ರ ವೇಳೆಗೆ ರಾಜ್ಯಕ್ಕೆ 1,000 ರಿಂದ 3,000 ಕ್ಕಿಂತ ಹೆಚ್ಚು ಐಸಿಯು ಹಾಸಿಗೆಗಳ ಅಗತ್ಯವಿರುತ್ತದೆ ಎಂದು ತೋರಿಸಿದೆ.

ಐಎನ್‌ಡಿಎಸ್‌ಐ–ಎಸ್‌ಐಎಂ(ಕೋವಿಡ್-19 ಗೆ ಸಂಬಂಧಿಸಿದ ಭಾರತೀಯ ವಿಜ್ಞಾನಿಗಳ ಪ್ರತಿಕ್ರಿಯೆ) ಮಾಡಿದ ಅಧ್ಯಯನಗಳ ಪ್ರಕಾರ, ಕರ್ನಾಟಕದಲ್ಲಿ ಜನವರಿ 25 ರ ವೇಳೆಗೆ 35,000 ದೈನಂದಿನ ಪ್ರಕರಣಗಳು ಮತ್ತು 500 ರಿಂದ 5,000 ತೀವ್ರತರವಾದ ರೋಗಲಕ್ಷಣವಿರುವ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

' ಜನವರಿ 21 ಮತ್ತು ಫೆಬ್ರವರಿ 10ರ ನಡುವೆ ಕೊರೊನಾ ಮೂರನೇ ಅಲೆಯ ಉತ್ತುಂಗದಲ್ಲಿ ದೇಶದಾದ್ಯಂತ, ನಿತ್ಯ ಆರು ಲಕ್ಷದಿಂದ ಒಂಬತ್ತು ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಬಹುದು. ಮಾರ್ಚ್ ವೇಳೆಗೆ, ಕಡಿಮೆಯಾಗಬಹುದು. ಪ್ರಕರಣಗಳ ಸಂಖ್ಯೆಯು ಎರಡನೆ ಅಲೆಗಿಂತ ದೊಡ್ಡದಾಗಿರುತ್ತದೆ’ಎಂದು ಹಲವಾರು ಕೋವಿಡ್ ಮಾದರಿಗಳಲ್ಲಿ ಕೆಲಸ ಮಾಡಿರುವ ಮತ್ತು ಐಎನ್‌ಡಿಎಸ್‌ಐ–ಎಸ್‌ಐಎಂನ ಭಾಗವಾಗಿರುವ ಹರಿಯಾಣದ ಅಶೋಕ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಮತ್ತು ಜೀವಶಾಸ್ತ್ರದ ಪ್ರಾಧ್ಯಾಪಕ ಪ್ರೊ.ಗೌತಮ್ ಮೆನನ್ ತಿಳಿಸಿದ್ದಾರೆ.

ನಿತ್ಯ ದೇಶದಲ್ಲಿ ಹೆಚ್ಚಾಗುತ್ತಿರುವ ಪ್ರಕರಣಗಳ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ.

ಲಸಿಕೆ ಹಾಕಿಸಿಕೊಳ್ಳದ ಮತ್ತು ಒಂದು ಡೋಸ್ ಮತ್ತು ಎರಡೂ ಡೋಸ್ ಲಸಿಕೆ ಪಡೆದವರ ಅಂಕಿ ಅಂಶಗಳನ್ನು ಅಧ್ಯಯನದಲ್ಲಿ ಪರಿಗಣಿಸಲಾಗಿದೆ. ಈಗಾಗಲೇ ಒಂದು ಬಾರಿ ಕೋವಿಡ್ ಸೋಂಕಿಗೆ ಒಳಗಾಗಿ ಗುಣಮುಖರಾಗಿರುವವರು ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ.

ಈ ಮಧ್ಯೆ,‘ವರದಿಯಾಗುತ್ತಿರುವಂತೆ ರಾಜ್ಯದ ಖಾಸಗಿ ವಲಯದ ಆಸ್ಪತ್ರೆಗಳಲ್ಲಿ 1.4 ಲಕ್ಷ ಹಾಸಿಗೆಗಳಿಲ್ಲ. ಎರಡನೇ ಅಲೆ ಪ್ರಾರಂಭವಾದಾಗ ನಾವು ಅದನ್ನು ಪರಿಶೀಲಿಸಿದ್ದೇವೆ. ಕೇವಲ 66,000 ಹಾಸಿಗೆಗಳು ಮಾತ್ರ ಲಭ್ಯವಿದ್ದವು. ಆದರೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪೋರ್ಟಲ್‌ನಲ್ಲಿ ಹೆಚ್ಚು ಹಾಸಸಿಗೆಗಳ ಲೆಕ್ಕ ನೀಡಲಾಗಿದೆ. ಬಹುಶಃ ಸರ್ಕಾರವು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಾಸಿಗೆಗಳನ್ನು ಪರಿಗಣಿಸಿರಬಹುದು’ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎಚ್.ಎಂ.ಪ್ರಸನ್ನ ತಿಳಿಸಿದ್ದಾರೆ.

‘ಒಟ್ಟಾರೆಯಾಗಿ, ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ 70,000 ಹಾಸಿಗೆಗಳಿವೆ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಹಾಸಿಗೆಗಳು ಇಲ್ಲದಿರಬಹುದು’ಎಂದು ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಹೆಲ್ತ್ ಕಮಿಷನರ್ ಡಿ ರಂದೀಪ್ ಅವರು, ‘ಆಪರೇಟಿವ್ ಸಂಖ್ಯೆಯು ಸರ್ಕಾರದ ನಿರ್ದೇಶನಗಳ ಪ್ರಕಾರ ಕೋವಿಡ್‌ಗಾಗಿ ನಿಯೋಜಿಸಲಾದ ಹಾಸಿಗೆಗಳಾಗಿರುತ್ತದೆ, ಒಟ್ಟು ಹಾಸಿಗೆಗಳಲ್ಲ’ ಎಂದಿದ್ಧಾರೆ.

ಅವರು ಹಂಚಿಕೊಂಡ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ 28,283 ವಯಸ್ಕ ಹಾಸಿಗೆಗಳು (ಸಾಮಾನ್ಯ, O2, ಎಚ್‌ಡಿಯು, ಐಸಿಯು, ವೆಂಟಿಲೇಟರ್) ಮತ್ತು 3,466 ಮಕ್ಕಳ ಹಾಸಿಗೆಗಳಿವೆ.

ಒಟ್ಟಾರೆಯಾಗಿ, ಆರೋಗ್ಯ ಇಲಾಖೆ ನಡೆಸುವ ಆಸ್ಪತ್ರೆಗಳಲ್ಲಿ (ವೈದ್ಯಕೀಯ ಶಿಕ್ಷಣ ಇಲಾಖೆ ನಡೆಸುವ ಆಸ್ಪತ್ರೆಗಳನ್ನು ಹೊರತುಪಡಿಸಿ) 31,749 ಹಾಸಿಗೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT