ಗುರುವಾರ , ಸೆಪ್ಟೆಂಬರ್ 29, 2022
26 °C

ಕೆಎಸ್‌ಆರ್‌ಟಿಸಿ ಪಾಸ್ ಅವಧಿ ವಿಸ್ತರಣೆ

ಪ‍್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತಿಮ ಸೆಮಿಸ್ಟರ್ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ನೀಡಿರುವ 2021–22ನೇ ಸಾಲಿನ ಪಾಸ್‌ ಅವಧಿಯನ್ನು ಕೆಎಸ್‌ಆರ್‌ಟಿಸಿ ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ.

ಹಳೆಯ ಪಾಸ್ ಮತ್ತು ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಸೀದಿ ತೋರಿಸಿ ಉಚಿತವಾಗಿ ವಿದ್ಯಾರ್ಥಿ ಗಳು ಪ್ರಯಾಣ ಮಾಡಬಹುದು. ಉಳಿದ ಸೆಮಿಸ್ಟರ್ ವಿದ್ಯಾರ್ಥಿಗಳು ಸೇವಾಸಿಂಧು ಮುಖೇನ ಹೊಸ ಪಾಸ್ ಪಡೆಯಲು ಅವಕಾಶ ಇದೆ.

ಪಾಸ್ ಪಡೆದುಕೊಳ್ಳಲು ಸೆ.30ರ ತನಕ ಅವಕಾಶ ಇದ್ದು, ಆ ತನಕ ಈ ವಿದ್ಯಾರ್ಥಿಗಳೂ ಹಳೆಯ ಪಾಸ್ ಮತ್ತು ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಸೀದಿ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಕೆಎಸ್ಆರ್‌ಟಿಸಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು