ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರು ದೇವರಿದ್ದಂತೆ. ಅವರೆಂದರೆ, ನನಗೆ ಬಹಳ ಇಷ್ಟ. ಅದಕ್ಕೆ, ರೋಡ್ ಶೋ ನಡೆಸುವಾಗ ಹಾರ ಹಾಕಲು ಮುಂದಾದೆ’.
– ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಮೋದಿ ಅವರ ರೋಡ್ ಶೋ ಸಂದರ್ಭದಲ್ಲಿ ಬ್ಯಾರಿಕೇಡ್ ಹಾರಿ, ಹಾರ ಹಾಕಲು ಯತ್ನಿಸಿದ 6ನೇ ತರಗತಿ ವಿದ್ಯಾರ್ಥಿ, ಇಲ್ಲಿನ ತೊರವಿಹಕ್ಕಲದ 11 ವರ್ಷದ ಬಾಲಕ ಕುನಾಲ್ ಎಸ್. ಧೋಂಗಡಿ ಮಾತುಗಳಿವು.
ಘಟನೆ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುನಾಲ್, ‘ಮೋದಿ ಅವರನ್ನು ನೋಡುವುದಕ್ಕಾಗಿ ನನ್ನ ಅಜ್ಜ, ಇಬ್ಬರು ಮಾವಂದಿರು ಹಾಗೂ ಎರಡೂವರೆ ವರ್ಷದ ಮಗುವಿನೊಂದಿಗೆ ಹೋಗಿದ್ದೆವು. ಮಗುವಿಗೆ ಗಣವೇಷ ತೊಡಿಸಿ, ಕೈಗೆ ಹಾರ ಕೊಟ್ಟಿದ್ದೆವು. ಅವಕಾಶ ಸಿಕ್ಕರೆ, ಮಗುವಿನಿಂದ ಮೋದಿ ಅವರಿಗೆ ಹಾರ ಹಾಕಿಸಬೇಕು ಅಂದುಕೊಂಡಿದ್ದೆವು’ ಎಂದು ಹೇಳಿದರು.
‘ರೋಡ್ ಶೋ ಸಂದರ್ಭದಲ್ಲಿ ಮೋದಿ ಅವರು ಕಾರಿನಿಂದ ಕೆಳಕ್ಕಿಳಿಯದಿದ್ದರಿಂದ, ಮಗುವಿನಿಂದ ಹೂಮಾಲೆ ಹಾಕಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ನಾನೇ ಹಾರ ಕಸಿದುಕೊಂಡು ಬ್ಯಾರಿಕೇಡ್ ಹಾರಿ ಮೋದಿ ಅವರತ್ತ ಓಡಿದೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ತಡೆಯಲು ಯತ್ನಿಸಿದರೂ ತಪ್ಪಿಸಿಕೊಂಡು ಮುನ್ನುಗ್ಗಿದೆ. ನಾನು ಹಾಗೆ ಮಾಡಿದ್ದು ತಪ್ಪಾದರೂ, ಹತ್ತಿರದಿಂದ ನೋಡಿದ್ದಕ್ಕೆ ತುಂಬಾ ಖುಷಿಯಾಯಿತು’ ಎಂದು ಅನುಭವ ಹಂಚಿಕೊಂಡರು.
ಕುನಾಲ್ ನಡೆಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.