ಬಿಜೆಪಿ ಸುಳ್ಳಿನ ಕಾರ್ಖಾನೆ ಇದ್ದಂತೆ. ಸುಳ್ಳಿನ ಕಂತೆಗಳನ್ನು ಸೃಷ್ಟಿ ಮಾಡಿ ಮುಗ್ಧ ಜನರ ತಲೆಗೆ ತುಂಬುತ್ತಾರೆ. ಪ್ರಧಾನಿ @narendramodi ಅವರು ಸಬ್ ಕ ಸಾಥ್, ಸಬ್ ಕ ವಿಕಾಸ್ ಎನ್ನುತ್ತಾರೆ, ಆದರೆ ಮಂತ್ರಿಮಂಡಲದಲ್ಲಿ ಒಬ್ಬನೇ ಒಬ್ಬ ಕ್ರಿಶ್ಚಿಯನ್, ಮುಸ್ಲಿಂ ಸಚಿವನಿಗೆ ಅವಕಾಶ ನೀಡಿಲ್ಲ. 1/7#Gandhinagara
ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ, ಬಡವರಿಗೆ ಉಚಿತವಾಗಿ ತಲಾ 7 ಕೆ.ಜಿ ಅಕ್ಕಿ ನೀಡಿದ್ದು ನಮ್ಮ ಸರ್ಕಾರ. ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಲು @BJP4Karnataka ಸರ್ಕಾರಕ್ಕೆ ಮನಸಿಲ್ಲ. ತಿನ್ನುವ ಅನ್ನದಲ್ಲೂ ರಾಜಕೀಯ ಮಾಡುತ್ತಾರೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಬಡವರಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ನೀಡುತ್ತೇವೆ. 2/7 pic.twitter.com/hbgu7jpl6n
ಬಿಜೆಪಿಯವರು ಹಿಂಬಾಗಿಲ ಮೂಲಕ ಮಾತ್ರ ಅಧಿಕಾರಕ್ಕೆ ಬರಬಲ್ಲರು. ಅವರಿಗೆ ಸ್ವಂತ ಶಕ್ತಿ ಇಲ್ಲ. ಹಣ, ಅಧಿಕಾರದ ಆಮಿಷವೊಡ್ಡಿ ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದ್ರೂ @BSYBJP ಅವರನ್ನೇ ಕಿತ್ತು ಬಿಸಾಕಿದ್ರು. ಇದಕ್ಕೇ ಹೇಳೋದು 'ಮಾಡಿದ್ದುಣ್ಣೋ ಮಹರಾಯ' ಎಂದು. 3/7#Gandhinagara
ಗಾಂಧೀಜಿಯವರನ್ನು ಗೌರವಿಸುವುದು ಎಂದರೆ ಅವರ ಭಾವಚಿತ್ರಕ್ಕೆ ಪೂಜೆ ಮಾಡುವುದಲ್ಲ. ಅವರ ಚಿಂತನೆಗಳ ಪಾಲನೆ ಹಾಗೂ ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡಲು ಶ್ರಮಿಸುವುದು ಎಂಬುದನ್ನು @BJP4Karnataka ನಾಯಕರು ಅರ್ಥ ಮಾಡಿಕೊಳ್ಳಬೇಕು. 7/7#Gandhinagara