ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವನಾಥ್‌ಗೆ ಹುಚ್ಚು’: ರಮೇಶ್‌ ಕುಮಾರ್ ವಾಗ್ದಾಳಿ

Last Updated 11 ಅಕ್ಟೋಬರ್ 2021, 14:11 IST
ಅಕ್ಷರ ಗಾತ್ರ

ಕೋಲಾರ: ‘ಅರಣ್ಯ ಭೂಮಿ ಒತ್ತುವರಿ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದೇನೆ. ಆದರೂ ಆ ವಿಚಾರ ಮಾತನಾಡುವ ಆತನಿಗೆ ಹುಚ್ಚು ಹಿಡಿದಿದೆ. ಆತ ಬೀದಿಯಲ್ಲಿ ನಿಂತು ಏನೇನೋ ಹೇಳುತ್ತಾನೆ. ನಾನೇನು ಮಾಡಲಿ?’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.

ರಮೇಶ್‌ಕುಮಾರ್‌ ಭ್ರಷ್ಟರೆಂದು ಹೇಳಿಕೆ ನೀಡಿರುವ ಎಚ್.ವಿಶ್ವನಾಥ್‌ರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಡಿ.ಕೆ.ರವಿ ಅವರು ಜಿಲ್ಲಾಧಿಕಾರಿ ಆಗಿದ್ದಾಗ ಪ್ರಕರಣ ಸಂಬಂಧ ಸರ್ವೆ ನಡೆಸಿ ಇತ್ಯರ್ಥಪಡಿಸಲಾಗಿದೆ. ಆದರೂ ಆ ಹುಚ್ಚ ಈ ವಿಚಾರವನ್ನು ಹೇಳುತ್ತಾನೆ’ ಎಂದು ಹರಿಹಾಯ್ದರು.

‘ಹೊಟ್ಟೆಗೆ ಏನು ತಿನ್ನುತ್ತೇವೆ ಎಂಬ ಪ್ರಜ್ಞೆ ಮನುಷ್ಯನಿಗೆ ಇರಬೇಕು. ರಾಜ್ಯದ ಮಂತ್ರಿಯಾಗಿದ್ದವನು, ಒಂದು ಪಕ್ಷದ ಅಧ್ಯಕ್ಷನಾಗಿದ್ದವನಿಗೆ ಏನು ಮಾತನಾಡಬೇಕೆಂಬ ಕನಿಷ್ಠ ಪರಿಜ್ಞಾನ ಬೇಡವಾ? ಆತನಿಗೆ ಜ್ಞಾಪಕ ಶಕ್ತಿ ಇಲ್ಲದೆ ಬುದ್ಧಿ ಹಾಳಾಗಿ ಮತ್ಸರದಿಂದ ಸಾಯ್ತಿದ್ದಾನೆ’ ಎಂದು ಏಕವಚನದಲ್ಲೇ ನಿಂದಿಸಿದರು.

‘ನಾನು ಭ್ರಷ್ಟನಾಗಿದ್ದರೆ ಸಂತೋಷ. ಆ ಬಗ್ಗೆ ತನಿಖೆ ಮಾಡಿಸಲಿ. ಏನಾದರೂ ದಾಖಲೆಪತ್ರಗಳಿದ್ದರೆ ತೆಗೆದುಕೊಂಡು ಹೋಗಿ ಎಸಿಬಿಗೆ ದೂರು ಕೊಡಲಿ. ಇಲ್ಲವೇ ಸರ್ಕಾರ ವಿಶ್ವನಾಥ್‌ ಅವರನ್ನೇ ತನಿಖಾಧಿಕಾರಿಯಾಗಿ ನೇಮಿಸಲಿ. ನಾನು ಭ್ರಷ್ಟನೆಂದು ಸಾಬೀತಾದರೆ ಯಾವ ಜೈಲಿಗೆ ಬೇಕಾದರೂ ಕಳುಹಿಸಲಿ. ನನ್ನ ಆಸ್ತಿಯನ್ನೆಲ್ಲಾ ಬರೆದುಕೊಟ್ಟು ಹೋಗುತ್ತೇನೆ’ ಎಂದು ಸವಾಲು ಹಾಕಿದರು.

‘ವಿಶ್ವನಾಥ್ ದೇಶಕ್ಕೆ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ನಾನು ಅವರಷ್ಟು ಒಳ್ಳೆಯ ಕೆಲಸ ಮಾಡಿಲ್ಲ. ಯಶಸ್ವಿನಿ ಯೋಜನೆ ಸೇರಿದಂತೆ ನಾನು ಮಾಡಿದ ಜನಪರ ಕೆಲಸಗಳು ಎಲ್ಲರಿಗೂ ಗೊತ್ತಿವೆ. ಅದನ್ನು ಹೇಳಿಕೊಂಡು ಕೂರುವುದಿಲ್ಲ. ನನ್ನ ವಿಚಾರ ಮಾತನಾಡಿರುವ ಅವರಿಗೆ ದೊಡ್ಡ ಧನ್ಯವಾದ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT