ಮಂಗಳವಾರ, ಜುಲೈ 27, 2021
27 °C

ಮಂತ್ರಾಲಯದಲ್ಲಿ ಮೊದಲ ಸ್ಥಳೀಯ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠವನ್ನು ಮಂಗಳವಾರದಿಂದ ದರ್ಶನಕ್ಕೆ ತೆರೆಯಲಾಗಿದ್ದು, ಮೊದಲ ದಿನ ಸ್ಥಳೀಯ ಭಕ್ತರು ಮಾತ್ರ ರಾಯರ ಮೂಲವೃಂದಾವನ ದರ್ಶನ ಪಡೆದರು.

ಹೊರಜಿಲ್ಲೆಗಳಿಂದ ಇನ್ನೂ ಬಸ್‌ ಸಂಚಾರ ಸಾಕಷ್ಟು ಆರಂಭವಾಗಿಲ್ಲ. ಹೀಗಾಗಿ ರಾಯಚೂರು ಹಾಗೂ ಮಂತ್ರಾಲಯ ಅಕ್ಕಪಕ್ಕದ ಗ್ರಾಮಗಳಿಂದ ಕೆಲವೇ ಭಕ್ತರು ಕೋವಿಡ್‌ ನಿಯಮಗಳ ಪಾಲನೆಯೊಂದಿಗೆ ದರ್ಶನಕ್ಕಾಗಿ ಬಂದಿದ್ದರು.

ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 9 ಗಂಟೆವರೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸದ್ಯಕ್ಕೆ ಅನ್ನಪ್ರಸಾದ ವ್ಯವಸ್ಥೆ ಮಠದಿಂದ ಮಾಡುತ್ತಿಲ್ಲ. ಆದರೆ ಭಕ್ತರಿಗೆ ವಸತಿಗೃಹ ಒದಗಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.