ಬೆಂಗಳೂರು: ‘ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲು ಸಾಧ್ಯ ಇಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಅತಿಥಿ ಉಪನ್ಯಾಸಕರ ಸಂಘಟನೆಗಳ ಜೊತೆ ಚರ್ಚಿಸಿದ ಬಳಿಕವೇ ಗೌರವಧನ ಘೋಷಿಸಲಾಗಿದೆ. ಈಗ ಕೆಲವು ಸಂಘಟನೆಗಳು ಈ ವಿಚಾರಕ್ಕೆ ಅನಗತ್ಯವಾಗಿ ರಾಜಕೀಯ ಬಣ್ಣ ಬಳಿಯುತ್ತಿರುವುದು ಸರಿಯಲ್ಲ’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಶುಕ್ರವಾರ (ಜ. 14) ಆದೇಶ ಹೊರಡಿಸಿದೆ.

ಗೌರವಧನ ಹೆಚ್ಚಿಸಿದ ಬಳಿಕವೂ ಮುಷ್ಕರದಿಂದ ಹಿಂದೆಸರಿಯುವುದಿಲ್ಲವೆಂದು ಅತಿಥಿ ಉಪನ್ಯಾಸಕರು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದಾರೆ. ಈ ಪೈಕಿ, 4,500 ಮಂದಿ ಮಾತ್ರ ಯುಜಿಸಿ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ’ ಎಂದಿದ್ದಾರೆ.

ಸರ್ಕಾರ ಅವರ ವೇತನವನ್ನು ಗೌರವಾರ್ಹವಾಗಿ ಹೆಚ್ಚಿಸಬೇಕೆಂದು ಮುಷ್ಕರನಿರತ ಸಂಘಟನೆಗಳೇ ಹೇಳಿದ್ದವು. ಅದಕ್ಕೆ ಸ್ಪಂದಿಸಿ, ದುಪ್ಪಟ್ಟಿಗಿಂತಲೂ ಹೆಚ್ಚು ವೇತನ ಏರಿಸಲಾಗಿದೆ. ಇಷ್ಟಾದ ಮೇಲೆಯೂ ಅತಿಥಿ ಉಪನ್ಯಾಸಕರು ಹಠ ಹಿಡಿದಿರುವುದು ಬೇಸರದ ಸಂಗತಿ’ ಎಂದರು.

ಮೋದಿಯಿಂದ ಪೋಪ್ಗೆ ಆಹ್ವಾನ: ಪ್ರಶಂಸೆಯೋ? ಕೀಳರಿಮೆಯೋ?: ಸುಬ್ರಮಣಿಯನ್ ಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.