ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ಬಾರಿಗೆ ಪುಟ್ಟಣ್ಣ ಜಯಭೇರಿ

Last Updated 10 ನವೆಂಬರ್ 2020, 22:00 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಪುಟ್ಟಣ್ಣ ಗೆಲುವು ಕಂಡಿದ್ದಾರೆ.

ಈ ಹಿಂದೆ ಇದೇ ಕ್ಷೇತ್ರದಿಂದ ಅವರು ಮೂರು ಬಾರಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಆದರೆ, ಈ ಬಾರಿ ಪಕ್ಷಾಂತರಗೊಂಡು ಬಿಜೆಪಿಯಿಂದ ಕಣಕ್ಕಿಳಿದಿದ್ದು, ನಾಲ್ಕನೇ ಬಾರಿ ಜಯಭೇರಿ ಬಾರಿಸಿದ್ದಾರೆ.

ಕ್ಷೇತ್ರದಲ್ಲಿ ಚಲಾವಣೆಯಾದ 13,287 ಕ್ರಮಬದ್ಧ ಮತಗಳಲ್ಲಿ ಪುಟ್ಟಣ ಅವರು ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲೇ 7,445 ಮತಗಳನ್ನು ಪಡೆದಿದ್ದಾರೆ.

ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಒಟ್ಟು ಕ್ರಮಬದ್ಧ ಮತಗಳಲ್ಲಿ ಶೇ 50ಕ್ಕಿಂತ ಒಂದು ಮತ ಹೆಚ್ಚು ಪಡೆಯಬೇಕು. ಈ ಕ್ಷೇತ್ರದಲ್ಲಿ ಗೆಲ್ಲಲು ಪ್ರಥಮ ಪ್ರಾಶಸ್ತ್ಯದಲ್ಲಿ 6,644 ಮತಗಳನ್ನು ಪಡೆಯಬೇಕಿತ್ತು.

ಕಾಂಗ್ರೆಸ್‌ನ ಪ್ರವೀಣ್‌ ಪೀಟರ್‌ 782 ಮತಗಳನ್ನು ಪಡೆದರೆ, ಜೆಡಿಎಸ್‌ನ ಎ.ಪಿ. ರಂಗನಾಥ್‌ 5,107 ಮತಗಳನ್ನು ಪಡೆದಿದ್ದಾರೆ. 1,251 ಮತ ಮತಗಳು ತಿರಸ್ಕೃತಗೊಂಡಿವೆ.

ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ಮಂಗಳವಾರ ಸಂಜೆ ಆರಂಭಗೊಂಡಿದ್ದು, ಎಣಿಕೆ ಮುಂದುವರಿದಿದೆ.

ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಆರಂಭಿಸಲಾಗಿದೆ. ಮತ ಎಣಿಕೆ ಬುಧವಾರ ಮಧ್ಯಾಹ್ನದವರೆಗೆ ಮುಂದುವರಿಯಬಹುದು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT