ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರ ಪ್ರಮಾಣ ಇಳಿಕೆ: ಎಸ್.ಎಂ.ಜಾಮದಾರ

ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದಲ್ಲಿ ಜಾಮದಾರ ಕಳವಳ
Last Updated 5 ಮಾರ್ಚ್ 2023, 21:15 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್ ಜಿಲ್ಲೆ): ‘ಲಿಂಗಾಯತರ ಪ್ರಮಾಣ ಶೇಕಡ 18 ಇದ್ದಿದ್ದು 40 ವರ್ಷಗಳಲ್ಲಿ ಏರಿಕೆ ಆಗುವ
ಬದಲಾಗಿ ಶೇಕಡ 9ಕ್ಕೆ ಇಳಿದಿದೆ. ನಮ್ಮ ಅಜ್ಞಾನ ಮತ್ತು ಸ್ವಾರ್ಥದ ಕಾರಣ ಇದು ಮುಂದೆ ಶೂನ್ಯ ಆಗಬಹುದು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದ ಎರಡನೇ ದಿನ ‘ಸ್ವತಂತ್ರ ಲಿಂಗಾಯತ ಧರ್ಮ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಹಾವನೂರ ವರದಿಯಲ್ಲಿ ಹೇಳಿರುವಂತೆ ಲಿಂಗಾಯತರ ಪ್ರಮಾಣ ಶೇ 18 ಇತ್ತು. ಚಿನ್ನಪ್ಪರೆಡ್ಡಿ ವರದಿಯಲ್ಲಿ ಶೇ 16 ಆಯಿತು. 2015ರ ಕಾಂತರಾಜ ಆಯೋಗದ ವರದಿಯಲ್ಲಿ ಶೇ 9 ಆಗಿದೆ. ಮೀಸಲಾತಿ ಪಡೆಯುವುದಕ್ಕಾಗಿ ಒಳಪಂಗಡಗಳ ಹೆಸರು ನಮೂದಿಸಿರುವುದು ಇದಕ್ಕೆ ಕಾರಣ. ನಮ್ಮ ಲಾಭಕ್ಕಾಗಿ ಅಸ್ಮಿತೆ, ಅಸ್ತಿತ್ವ ಹಾಗೂ ಧರ್ಮವನ್ನು ಮಾರಾಟದ ವಸ್ತುವನ್ನಾಗಿಸಿದ್ದೇವೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ’
ಎಂದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ ಮಾತನಾಡಿ, ‘ನಾಗಪುರದ ಪ್ರಭಾವಕ್ಕೆ ಒಳಗಾಗದಿದ್ದರೆ ಲಿಂಗಾಯತ ಧರ್ಮ ಹತ್ತಿರ ಆಗುತ್ತದೆ. ಬಸವಣ್ಣನವರ ಬಗ್ಗೆ ಡಾ.ಅಂಬೇಡ್ಕರ್ ಅರಿತಿದ್ದರು. ಈ ಬಗ್ಗೆ ಅವರು ಪುಸ್ತಕವೊಂದರಲ್ಲಿ ಮಾಹಿತಿಯೂ ನೀಡಿರುವುದು ಬಹುತೇಕರಿಗೆ ಗೊತ್ತಿಲ್ಲ. ನಾನು ಲಿಂಗಾಯತನಲ್ಲ. ಆದರೆ, ಲಿಂಗಾಯತ ಧರ್ಮವಾದರೆ ಇದಕ್ಕೆ ಸೇರ್ಪಡೆ ಆಗಬೇಕೆಂದಿದ್ದೇನೆ’ ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಕೆಂಪೇಗೌಡ, ಮಹಾಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಬಸವರಾಜ ಧನ್ನೂರ, ಹುಲಸೂರ ಶಿವಾನಂದ ಸ್ವಾಮೀಜಿ, ಗುಳೇದಗುಡ್ಡ ಬಸವರಾಜ ಪಟ್ಟದಾರ್ಯ ಮಾತನಾಡಿದರು.

ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಇಳಕಲ್ ಗುರುಮಹಾಂತ ಸ್ವಾಮೀಜಿ, ಮಾತೆ ಗಂಗಾದೇವಿ, ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಂಬಿಕಾ, ಚಂದ್ರಶೇಖರ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT