ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಗೆ ಹೊಸ ವೇತನ ಶ್ರೇಣಿ ಭರವಸೆ: ಷಡಾಕ್ಷರಿ

Last Updated 14 ಜುಲೈ 2022, 18:43 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಸರ್ಕಾರಿ ನೌಕರರಿಗೆ 2023ರ ಜನವರಿಯಿಂದ 7ನೇವೇತನ ಆಯೋಗದ ಶಿಫಾರಸಿನಡಿ ಹೊಸ ವೇತನ ಶ್ರೇಣಿ ಜಾರಿಯಾಗುವ ಭರವಸೆ ದೊರೆತಿದೆ’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಆಗಸ್ಟ್‌ನಲ್ಲಿ 7ನೇ ವೇತನ ಆಯೋಗ ರಚಿಸಿ, ವಿಧಾನಸಭೆ ಚುನಾವಣೆ ಒಳಗೆ ಹೊಸ ವೇತನ ಶ್ರೇಣಿ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಕೆಜಿಐಡಿ, ಜಿಪಿಎಫ್ ಡಿಜಿಟಲ್ ವ್ಯವಸ್ಥೆ ಮಾಡಿದ್ದು, ಮುಂದೆ ಆನ್‌ಲೈನ್‌ ಮೂಲಕವೇ ಕೆಜಿಐಡಿ ಸಾಲ ಮಂಜೂರಾಗುವ ಸೌಲಭ್ಯ ದೊರೆಯಲಿದೆ’ ಎಂದು ಅವರು ಹೇಳಿದರು.

‘ಶೀಘ್ರವೇ ಇ-ಸೇವಾ ಪುಸ್ತಕವ್ಯವಸ್ಥೆ ಬರಲಿದೆ. ನೌಕರರ ಮೊಬೈಲ್‌ಗೆ ವೇತನ ಮಾಹಿತಿಸಂದೇಶ ಬರುವ ವ್ಯವಸ್ಥೆ ಮಾಡಿ
ದ್ದೇವೆ. ₹ 1 ಕೋಟಿಯವರೆಗಿನ ಉಚಿತ ಚಿಕಿತ್ಸೆ ಸೌಲಭ್ಯದ ಯೋಜನೆಗೂ ಶೀಘ್ರವೇ ಚಾಲನೆದೊರೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT