ಶುಕ್ರವಾರ, ಜೂನ್ 25, 2021
21 °C
ಡಿಸಿಐಬಿ ಪೊಲೀಸರ ಕಾರ್ಯಾಚರಣೆ:

ಕೋಳಿ ಅಂಕ: 10 ಮಂದಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ತಾಲ್ಲೂಕಿನ ಚೆಂಬು ಗ್ರಾಮದ ಉರುಬೈಲ್ ಎಂಬಲ್ಲಿ ಗುಂಪೊಂದು ನಡೆಸುತ್ತಿದ್ದ ಕೋಳಿ ಅಂಕದ ಮೇಲೆ ಕೊಡಗು ಡಿಸಿಐಬಿ ಪೊಲೀಸರು ದಾಳಿ ನಡೆಸಿ, 10 ಮಂದಿಯನ್ನು ಬಂಧಿಸಿ ನಗದು ಹಾಗೂ ಕೋಳಿ ವಶಕ್ಕೆ ಪಡೆದುಕೊಂಡಿದ್ದಾರೆ.

ಗ್ರಾಮದ ಸ್ಥಳವೊಂದರಲ್ಲಿ ಕೋಳಿಗಳನ್ನು ಕಟ್ಟಿ 10 ಮಂದಿ ಜೂಜಾಡುತ್ತಿದ್ದರು. ಕೋಳಿ ಅಂಕಕ್ಕೆ ಬಳಸಿದ ಅಂದಾಜು ₹ 15 ಸಾವಿರ, 35 ಕೋಳಿ ಹಾಗೂ ಸ್ಥಳದಲ್ಲಿದ್ದ ₹ 20,300 ನಗದು ವಶಕ್ಕೆ ಪಡೆದಿದ್ದಾರೆ.

ಡಿಸಿಐಬಿ ಇನ್‌ಸ್ಪೆಕ್ಟರ್‌ ಎನ್.ಕುಮಾರ್ ಆರಾಧ್ಯ, ಗ್ರಾಮಾಂತರ ಪಿಎಸ್‌ಐ ಎಚ್.ವಿ ಚಂದ್ರಶೇಖರ್‌, ಡಿ.ಸಿ.ಐ.ಬಿ ಸಿಬ್ಬಂದಿಗಳಾದ ವಿ.ಜಿ.ವೆಂಕಟೇಶ್, ಬಿ.ಎಲ್‌.ಯೋಗೇಶ್ ಕುಮಾರ್, ಕೆ.ಆರ್.ವಸಂತ, ಎಂ.ಎನ್.ನಿರಂಜನ, ಕೆ.ಎಸ್.ಶಶಿಕುಮಾರ್, ಸಂಪಾಜೆ ಉಪ ಠಾಣೆಯ ಎಎಸ್ಐ ಶ್ರೀಧರ್ ಅವರು ದಾಳಿಯಲ್ಲಿ ಭಾಗವಹಿಸಿದ್ದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ಇರಿಸುವಂತೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು