ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿಗೆ ಕೌನ್ಸೆಲಿಂಗ್ ಕಾರ್ಯಾಗಾರ: ವಾಯುಪಡೆ ಜತೆಗೆ ನಿಮ್ಹಾನ್ಸ್ ಒಪ್ಪಂದ

Last Updated 23 ಜೂನ್ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು:ಸಿಬ್ಬಂದಿಗೆ ಕೌನ್ಸೆಲಿಂಗ್ ಕಾರ್ಯಾಗಾರ ನಡೆಸುವ ಬಗ್ಗೆರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌)ಭಾರತೀಯ ವಾಯುಪಡೆ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಏರ್ ಮಾರ್ಷಲ್ಸಜು ಬಾಲಕೃಷ್ಣನ್ ಹಾಗೂ ನಿಮ್ಹಾನ್ಸ್ ನಿರ್ದೇಶಕಿಡಾ. ಪ್ರತಿಮಾ ಮೂರ್ತಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಆರು ದಿನಗಳ ಕಾರ್ಯಾಗಾರದಲ್ಲಿಭಾರತೀಯ ವಾಯುಪಡೆಯ ಸಿಬ್ಬಂದಿ ಜತೆಗೆ ಸಂಸ್ಥೆಯ ವೈದ್ಯರು ಸಮಾಲೋಚನೆ ನಡೆಸಿ, ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.

ಒತ್ತಡ ನಿರ್ವಹಣೆ, ಮಾನಸಿಕ ಅನಾರೋಗ್ಯದಿಂದ ಹೊರಬರುವಿಕೆ ಸೇರಿದಂತೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಬಗ್ಗೆ ಈ ಕಾರ್ಯಾಗಾರದಲ್ಲಿ ವಾಯುಪಡೆಯ ಸಿಬ್ಬಂದಿಗೆ ಮಾರ್ಗದರ್ಶನ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT