ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಪಿಂಚಣಿ ಯೋಜನೆ| 3 ವರ್ಷಗಳಾದರೂ ಸಲ್ಲಿಕೆಯಾಗದ ವರದಿ: ಹೊರಟ್ಟಿ ಬೇಸರ

ನೂತನ ಪಿಂಚಣಿ ಯೋಜನೆಯಲ್ಲಿ ಮಾರ್ಪಾಡು
Last Updated 31 ಡಿಸೆಂಬರ್ 2021, 18:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೂತನ ಪಿಂಚಣಿ ಯೋಜನೆಯಲ್ಲಿ ಮಾರ್ಪಾಡು ಮಾಡುವ ಕುರಿತು ಪರಿಶೀಲಿಸಲು ಸರ್ಕಾರ ಅಧಿಕಾರಿಗಳ ಸಮಿತಿಯನ್ನು ರಚಿಸಿ ಮೂರು ವರ್ಷಗಳಾಗಿದ್ದರೂ ಇದುವರೆಗೆ ವರದಿ ಸಲ್ಲಿಕೆಯಾಗದಿರುವುದಕ್ಕೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ನೂತನ ಪಿಂಚಣಿ ಯೋಜನೆಯ ಮಾರ್ಪಾಡು ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ?:2006ಕ್ಕಿಂತ ಮುಂಚಿನ ಸರ್ಕಾರಿ, ಅನುದಾನಿತ ಸಿಬ್ಬಂದಿಯ ವೇತನ ಹಾಗೂ ಇತರ ಸೌಲಭ್ಯಗಳು ಒಂದೇ ರೀತಿಯಾಗಿದ್ದವು. ನೂತನ ಪಿಂಚಣಿ ಆದೇಶದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ವಂತಿಗೆಯನ್ನು ಆಡಳಿತ ಮಂಡಳಿಗಳೇ ತುಂಬಬೇಕೆಂದು ಆದೇಶಿಸಲಾಗಿದೆ. ಇದರಿಂದಾಗಿ ಅಲ್ಲಿ ನೂತನ ಪಿಂಚಣಿ ಯೋಜನೆ ಜಾರಿಗೊಂಡಿಲ್ಲ.

ಅನುದಾನಿತ ಸಿಬ್ಬಂದಿಯ ಪಿಂಚಣಿ ಪಾವತಿಯನ್ನು ಆಡಳಿತ ಮಂಡಳಿಗಳಿಗೆ ವಹಿಸಿರುವುದು ಸಂವಿಧಾನ ವಿರೋಧಿ
ಯಾಗಿದೆಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT