ಬುಧವಾರ, ಸೆಪ್ಟೆಂಬರ್ 23, 2020
26 °C
ಗಂಡು ಮಗು ಆಗಲಿಲ್ಲವೆಂದು ಹೆಣ್ಣು ಮಗುವನ್ನು ಸಾಯಿಸಿದ ಅಪ್ಪ–ಅಮ್ಮ

ಯಲ್ಲಾಪುರ: ಪಾಲಕರೇ ಹಸುಗೂಸಿನ ಹತ್ಯೆ ಆರೋಪಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ಐದು ದಿನಗಳ ಹಿಂದೆ ನಡೆದ 40 ದಿನಗಳ ಹಸುಗೂಸಿನ (ಹೆಣ್ಣು ಮಗು) ನಾಪತ್ತೆ ಪ್ರಕರಣ ಭೇದಿಸಿರುವ ಇಲ್ಲಿನ ಪೊಲೀಸರು, ಸ್ವಂತ ಮಗುವನ್ನೇ ಹತ್ಯೆಗೈದಿರುವ ಪಾಲಕರನ್ನು ಬಂಧಿಸಿದ್ದಾರೆ.

ಚಂದ್ರಶೇಖರ ಭಟ್ಟ ಮತ್ತು ಪ್ರಿಯಾಂಕಾ ಭಟ್ಟ ದಂಪತಿ ಹತ್ಯೆಯ ಆರೋಪಿಗಳು. ತಾಲ್ಲೂಕಿನ ರಾಮನಕೊಪ್ಪದಲ್ಲಿ ಹಾಸಿಗೆಯಲ್ಲಿ ಮಲಗಿದ್ದ ಹಸುಗೂಸು, ಶನಿವಾರ ರಾತ್ರಿ 2.30ರ ಸುಮಾರಿಗೆ ಕಾಣೆಯಾಗಿದ್ದ ಬಗ್ಗೆ ಪಾಲಕರು ಊರವರಿಗೆ ತಿಳಿಸಿದ್ದರು. ಮಧ್ಯರಾತ್ರಿಯಿಂದಲೇ ಊರವರು ಮಗುವಿಗಾಗಿ ಹುಡುಕಾಟ ನಡೆಸಿದ್ದರು. ಸೋಮವಾರ ಬೆಳಿಗ್ಗೆ ನೀರು ತರಲು ಹೋದವರಿಗೆ ಮಗುವಿನ ಶವ ಬಾವಿಯಲ್ಲಿ ಕಂಡಿತ್ತು.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ‘ವನದೇವತೆ ಚೌಡಿ, ಮಗುವನ್ನು ಅಡಗಿಸಿಟ್ಟಿದೆ ಎಂದು ಮಗುವಿನ ತಂದೆ–ತಾಯಿ ನಾಟಕ ಮಾಡಿದ್ದರು. ಮಗು ಕಾಣೆಯಾದ ರಾತ್ರಿ ಮನೆಯ ಹೊರ ಬಾಗಿಲಿನ ಚಿಲಕ ತೆಗೆದಿದ್ದು ಕಂಡು ಬಂದಿತ್ತು. ಇದೇ ಜಾಡು ಹಿಡಿದು ತನಿಖೆ ತೀವ್ರಗೊಳಿಸಲಾಗಿತ್ತು. ಗಂಡು ಮಗು ಆಗಲಿಲ್ಲ ಎಂಬ ಕಾರಣಕ್ಕೆ ತಂದೆ–ತಾಯಿಯೇ ಮಗುವನ್ನು ಸಾಯಿಸಿದ್ದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಎಸ್ಪಿ ಶಿವಪ್ರಕಾಶ ದೇವರಾಜು, ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಮಾರ್ಗದರ್ಶನದಲ್ಲಿ, ಪಿಐ ಸುರೇಶ ಯಳ್ಳೂರ, ಮಂಜುನಾಥ ಗೌಡರ್, ಬಸವರಾಜು, ಎಎಸ್‌ಐಗಳಾದ ಮಂಜುನಾಥ ಮನ್ನಂಗಿ, ಆನಂದ ಪಾವಸ್ಕರ, ಸಿಬ್ಬಂದಿ ರವಿ ತಾಂಡೇಲ, ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ನೀಲನ ಮೋರೆ, ಶೋಭಾ ನಾಯ್ಕ, ದೀಪಾ ಪೈ, ಶಿಲ್ಪಾ ಗೌಡ, ಕೃಷ್ಣ ಮಾತ್ರೋಜಿ, ಗಿರೀಶ ಲಮಾಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು