ಶುಕ್ರವಾರ, ಆಗಸ್ಟ್ 19, 2022
25 °C
ರಾಷ್ಟ್ರಮಟ್ಟದಲ್ಲಿ ಬಿ.ಟೆಕ್‌ ಪ್ರವೇಶ ಪರೀಕ್ಷೆ: ‘ಪೆಸೆಟ್‌– 2020’ ಫಲಿತಾಂಶ ಪ್ರಕಟ

ಪೆಸೆಟ್‌: ಕಾವ್ಯಾ ಭಟ್‌ ಪ್ರಥಮ ರಕ್ಷಿತ್‌ಗೆ ದ್ವಿತೀಯ ರ‍್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯ ಬಿ.ಟೆಕ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಅಖಿಲ ಭಾರತ ಮಟ್ಟದಲ್ಲಿ ನಡೆಸಿದ ಪ್ರವೇಶ ಪರೀಕ್ಷೆಯ (ಪೆಸೆಟ್‌– 2020) ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ನ್ಯಾಷನಲ್ ಪಬ್ಲಿಕ್‌ ಶಾಲೆಯ ಕಾವ್ಯಾ ಭಟ್‌ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ.

ಸಿಇಟಿ ಮತ್ತು ಕಾಮೆಡ್-ಕೆನಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿದ್ದ ಎಂ. ರಕ್ಷಿತ್, ಈ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಶ್ರೀಕುಮಾರನ್ಸ್ ಚಿಲ್ಡ್ರನ್ ಹೋಂನ ಸಿಂಚನಾ ಕುಂಬ್ಳೆತೃತೀಯ ಸ್ಥಾನ ಗಳಿಸಿದ್ದಾರೆ. ಆಗಸ್ಟ್‌ತಿಂಗಳಲ್ಲಿ 31 ನಗರಗಳಲ್ಲಿ ನಡೆದ ಪರೀಕ್ಷೆಯಲ್ಲಿ 16,800 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್. ದೊರೆಸ್ವಾಮಿ ತಿಳಿಸಿದರು.

ಸೋಮವಾರ ಫಲಿತಾಂಶ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಮೊದಲ ಮೂರು ರ‍್ಯಾಂಕ್ ಬಂದಿರುವ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜಿನಲ್ಲಿ ಉಚಿತವಾಗಿ ಸೀಟು ನೀಡುತ್ತೇವೆ. ರ‍್ಯಾಂಕ್ ವಿದ್ಯಾರ್ಥಿಗಳಿಗೆ ಇದೇ 18ರಿಂದ 20ರವರೆಗೆ ಆಫ್‌ಲೈನ್‌ನಲ್ಲೇ ಕೌನ್ಸೆಲಿಂಗ್ ನಡೆಸಲಾಗುತ್ತದೆ’ ಎಂದರು.

‘1,523 ವಿದ್ಯಾರ್ಥಿಗಳು ಪ್ಲೇಸ್‌ ಮೆಂಟ್‌ಗೆ ಅರ್ಹತೆ ಪಡೆದಿದ್ದರು. 22 ಕಂಪನಿಗಳು ಅನ್‌ಲೈನ್‌ನಲ್ಲಿ ಸಂದ ರ್ಶನ ನಡೆಸಿದ ಉದ್ಯೋಗ ನೀಡಿವೆ. ವಾರ್ಷಿಕ ₹ 39.92 ಲಕ್ಷ ಪ್ಯಾಕೇಜ್‌ಗೆ ಮೂರು ವಿದ್ಯಾರ್ಥಿಗಳು ಈ ಬಾರಿ ಆಯ್ಕೆ ಆಗಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.