ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಪೆಟ್‌ ಸ್ಕ್ಯಾನ್‌ ಉಚಿತ

Last Updated 23 ಫೆಬ್ರುವರಿ 2021, 22:28 IST
ಅಕ್ಷರ ಗಾತ್ರ

ಬೆಂಗಳೂರು: ‘ಬಡತನ ರೇಖೆಗಿಂತ ಕೆಳಗಿರುವವರಿಗೆ ಪೊಷಿಟ್ರಾನ್‌ ಎಮಿಷನ್‌ ಟೊಮೊಗ್ರಫಿ (ಪಿಇಟಿ) ಪರೀಕ್ಷೆಯನ್ನುಉಚಿತವಾಗಿ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಮಂಗಳವಾರ ತಿಳಿಸಿದರು.

‘ಕ್ಯಾನ್ಸರ್‌, ಹೃದಯ ಹಾಗೂ ಮಿದುಳು ಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚಲು ಪೆಟ್‌ ಸ್ಕ್ಯಾನ್‌ ಸಹಕಾರಿ. ಇದಕ್ಕಾಗಿ ವಿಶ್ವದ ವಿವಿಧೆಡೆ ಸುಮಾರು ₹30 ಸಾವಿರ ಶುಲ್ಕ ಪಡೆಯಲಾಗುತ್ತಿದೆ. ನಮ್ಮಲ್ಲಿ ಕೇವಲ ₹8 ಸಾವಿರ ಪಾವತಿಸಿ ಈ ಪರೀಕ್ಷೆ ಮಾಡಿಸಿಕೊಳ್ಳಬಹುದು. ಬಡ ವರ್ಗದವರಿಗೆ ಇದು ಉಚಿತ’ ಎಂದರು.

‘ಕಿದ್ವಾಯಿ ಆಸ್ಪತ್ರೆಯನ್ನು ದೇಶದಲ್ಲೇ ಮಾದರಿಯನ್ನಾಗಿ ರೂಪಿಸುವುದು ನಮ್ಮ ಗುರಿ. ಹೀಗಾಗಿ ಕಾರ್ಪೊರೇಟ್‌ ಕಂಪನಿಗಳ ಸಹಯೋಗದಲ್ಲಿ ಕಟ್ಟಡ ನವೀಕರಣ ಮಾಡಲಾಗುತ್ತಿದೆ. ಹಾಸಿಗೆ ಸಾಮರ್ಥ್ಯವನ್ನು ಈಗಿನ 650 ರಿಂದ 1,000ಕ್ಕೆ ಹೆಚ್ಚಿಸುತ್ತಿದ್ದೇವೆ. ಜೂನ್‌ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT