ಶನಿವಾರ, ಜುಲೈ 2, 2022
26 °C

ಪಿಎಂ ಕುಸುಮ್‌–ಬಿ: ಕೃಷಿ ಪಂಪ್‌ಸೆಟ್‌ಗೆ ಸೌರಶಕ್ತಿ, ಇಲ್ಲಿದೆ ಸೌಲಭ್ಯದ ವಿವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಜಾಲಮುಕ್ತ ಸೌರ ಪಂಪ್‌ಸೆಟ್‌ ಯೋಜನೆ ಜಾರಿಗೊಳಿಸಲು ಪಿಎಂ ಕುಸುಮ್‌–ಬಿ ಗೆ (ಕಿಸಾನ್‌ ಊರ್ಜಾ ಸುರಕ್ಷಾ ಏವಂ ಉತ್ಥಾನ್‌ ಮಹಾ ಅಭಿಯಾನ್‌) ಸಂಪುಟ ಸಭೆ ಒಪ್ಪಿಗೆ ನೀಡಿದೆ. 10 ಸಾವಿರ ರೈತರಿಗೆ ಇದರ ಸೌಲಭ್ಯ ಸಿಗುತ್ತದೆ.

ರೈತರ ಹೊಲದಲ್ಲಿ ಸೋಲಾರ್‌ ಪ್ಯಾನಲ್‌ ಅಳವಡಿಸಿ ಅಲ್ಲಿ ಉತ್ಪಾದನೆಯಾದ ವಿದ್ಯುತ್‌ಅನ್ನು ಪಂಪ್‌ಸೆಟ್‌ಗಳಿಗೆ ಬಳಸಬೇಕಾಗುತ್ತದೆ. ಹೀಗಾಗಿ ಇದಕ್ಕೆ ಯಾವುದೇ ವಿದ್ಯುತ್ ಜಾಲದಿಂದ ಸಂಪರ್ಕ ಪಡೆಯಬೇಕಾದ ಅಗತ್ಯವಿಲ್ಲ.

ಯೋಜನೆ ಜಾರಿಗೆ ₹307.23 ಕೋಟಿ ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ ₹106.97 ಕೋಟಿ ಭರಿಸಲಿದೆ. ಉಳಿದ ಹಣವನ್ನು ಕೇಂದ್ರ ಸರ್ಕಾರ ನೀಡುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆ ಹೊಸ ಪಂಪ್‌ಸೆಟ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. 3 ಎಚ್‌ಪಿ ಹೊಂದಿರುವ 250, 5 ಎಚ್‌ಪಿ ಹೊಂದಿರುವ 750 ಹಾಗೂ 7.5 ಎಚ್‌ಪಿ ಪಂಪ್‌ಸೆಟ್‌ ಹೊಂದಿರುವ 9,000 ರೈತರಿಗೆ ಈ ಸೌಲಭ್ಯ ನೀಡಲಾಗುತ್ತದೆ. ಫಲಾನುಭವಿಗಳನ್ನು ಕ್ರೆಡೆಲ್‌ ಸಂಸ್ಥೆಯ ಮೂಲಕ ಆನ್‌ಲೈನ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಯೋಜನೆಯ ಶೇ 30 ರಷ್ಟು ರಾಜ್ಯ ಸರ್ಕಾರ, ಶೇ 30 ಕೇಂದ್ರ ಸರ್ಕಾರ ಹಾಗೂ ಶೇ 40 ರಷ್ಟನ್ನು ರೈತರು ಬ್ಯಾಂಕ್‌ ಸಾಲದ ಮೂಲಕ ಭರಿಸಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು