ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರ್ಯಾಂಡ್‌ ಫಿನಾಲೆ’ಗೆ ದಕ್ಷ್‌ ಶೆಟ್ಟರ್‌

‘ಪ್ರಜಾವಾಣಿ’ ಆನ್‌ಲೈನ್‌ ಕ್ವಿಜ್‌ ಚಾಂಪಿಯನ್‌ಷಿಪ್‌
Last Updated 12 ಫೆಬ್ರುವರಿ 2021, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ಆಶ್ರಯದಲ್ಲಿ ನಡೆಯುತ್ತಿರುವ ಆನ್‌ಲೈನ್‌ ಕ್ವಿಜ್‌ ಚಾಂಪಿಯನ್‌ಷಿಪ್‌ನ ಬೆಂಗಳೂರು ವಲಯ ಮಟ್ಟದಲ್ಲಿ ಮೊದಲ ಸ್ಥಾನ ಗಳಿಸಿದ ದಕ್ಷ್‌ ಶೆಟ್ಟರ್‌, ಇದೇ 20ರಂದು ನಡೆಯುವ ರಾಜ್ಯಮಟ್ಟದ ‘ಗ್ರ್ಯಾಂಡ್‌ ಫಿನಾಲೆ’ಗೆ ಅರ್ಹತೆ ಗಳಿಸಿದ್ದಾರೆ.

ಬೆಂಗಳೂರು ವಲಯ ಮಟ್ಟದ ಫೈನಲ್‌ ಸ್ಪರ್ಧೆಯು ಶುಕ್ರವಾರ ಸಂಜೆ 6 ರಿಂದ 7.30ರ ವರೆಗೆ ಝೂಮ್ ಆ್ಯಪ್ ಮೂಲಕ ನಡೆದಿತ್ತು. ಇದರಲ್ಲಿ ಆರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಇವರ ಪೈಕಿ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಹೇಳಿದಆರ್‌.ಟಿ.ನಗರದ ಪ್ರೆಸಿಡೆನ್ಸಿ ಶಾಲೆಯ ದಕ್ಷ್‌ ಶೆಟ್ಟರ್‌ ಮೊದಲ ಸ್ಥಾನ ಪಡೆದರು.

ರ‍್ಯಾನ್‌ ಇಂಟರ್‌ನ್ಯಾಷನಲ್‌ ಶಾಲೆಯ ಸ್ಪರ್ಶ್‌ ಪ‍್ರದೀಪ್‌ ಜೈನ್‌ ಹಾಗೂ ಅಚೀವ್‌ ಸ್ಕೂಲ್‌ ಆಫ್‌ ಎಜುಕೇಷನ್‌ನ ಶೌರ್ಯ ವಿ.ಅಭಿಮನ್ಯು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.

ಪ್ರಾಥಮಿಕ ಸುತ್ತಿನ ಸ್ಪರ್ಧೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಆರು ಮಂದಿ ವಲಯ ಮಟ್ಟದ ಫೈನಲ್‌ ಪ್ರವೇಶಿಸಿದ್ದರು.

ಆನ್‌ಲೈನ್‌ ಮೂಲಕ ನಡೆಯುವ ‘ಗ್ರ್ಯಾಂಡ್‌ ಫಿನಾಲೆ’ಯಲ್ಲಿ ರಾಜ್ಯದ ಏಳು ವಲಯಗಳಿಂದ ಆಯ್ಕೆಯಾಗಿರುವ ಏಳು ವಿದ್ಯಾರ್ಥಿಗಳು ಪೈಪೋಟಿ ನಡೆಸಲಿದ್ದಾರೆ. ಮೊದಲ ಮೂರು ಸ್ಥಾನ ಗಳಿಸಿದವರಿಗೆ ಕ್ರಮವಾಗಿ ₹25 ಸಾವಿರ, ₹15 ಸಾವಿರ ಮತ್ತು ₹10 ಸಾವಿರ ನಗದು ಬಹುಮಾನ ದೊರೆಯಲಿದೆ.

ಬೆಂಗಳೂರು ವಲಯ ಮಟ್ಟದ ವಿಜೇತರು

ಹೆಸರು; ಶಾಲೆ; ತರಗತಿ; ಜಿಲ್ಲೆ

ದಕ್ಷ್‌ ಶೆಟ್ಟರ್, ಪ್ರೆಸಿಡೆನ್ಸಿ ಶಾಲೆ ಆರ್‌.ಟಿ.ನಗರ, 10, ಬೆಂಗಳೂರು ನಗರ

ಸ್ಪರ್ಶ್‌ ಪ್ರದೀಪ್‌ ಜೈನ್‌, ರ‍್ಯಾನ್‌ ಇಂಟರ್‌ನ್ಯಾಷನಲ್‌ ಶಾಲೆ, 9, ಬೆಂಗಳೂರು ನಗರ

ಶೌರ್ಯ ವಿ.ಅಭಿಮನ್ಯು, ಅಚೀವ್‌ ಸ್ಕೂಲ್‌ ಆಫ್‌ ಎಜುಕೇಷನ್‌, 5, ಬೆಂಗಳೂರು ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT