ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರಿಗೆ ಕೋವಿಡ್‌ ಚಿಕಿತ್ಸೆ: ಮರುಪಾವತಿ ದರಪಟ್ಟಿ ಪ್ರಕಟ

Last Updated 1 ಏಪ್ರಿಲ್ 2021, 18:24 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪೀಡಿತರಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳ ಸದಸ್ಯರ ವೈದ್ಯಕೀಯ ವೆಚ್ಚದ ಬಿಲ್‌ಗಳ ಮರುಪಾವತಿ ಕ್ಲೇಮ್‌ಗಳ ಇತ್ಯರ್ಥಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಗುರುವಾರ ದರಪಟ್ಟಿ ಪ್ರಕಟಿಸಿದೆ.

ದಿನವೊಂದಕ್ಕೆ ಸಾಮಾನ್ಯ ವಾರ್ಡ್‌ಗೆ ₹ 10,000, ಹೈ ಡಿಪೆಂಡೆನ್ಸಿ ಯೂನಿಟ್‌ಗೆ ₹ 12,000, ವೆಂಟಿಲೇಟರ್‌ ರಹಿತವಾದ ಐಸೋಲೇಷನ್‌ ತೀವ್ರ ನಿಗಾ ಘಟಕಕ್ಕೆ ₹ 15,000 ಮತ್ತು ವೆಂಟಿಲೇಟರ್‌ ಸಹಿತವಾದ ಐಸೋಲೇಷನ್‌ ತೀವ್ರ ನಿಗಾ ಘಟಕಕ್ಕೆ ₹ 25,000 ದರದ ಆಧಾರದಲ್ಲಿ ಕ್ಲೇಮ್‌ ಬಿಲ್‌ಗಳನ್ನು ಇತ್ಯರ್ಥಗೊಳಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT