ಗುರುವಾರ , ಜೂನ್ 24, 2021
23 °C

ಹೇಳಿಕೆ‌ ದಾಖಲಿಸಲು ಅನುಮತಿ: ಸದ್ಯದಲ್ಲೇ‌ ನ್ಯಾಯಾಲಯಕ್ಕೆ ಯುವತಿ‌ ಹಾಜರು -ವಕೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಅತ್ಯಾಚಾರದ ಪ್ರಕರಣದ ‌ಸಂತ್ರಸ್ತೆಯಾದ ಯುವತಿಯನ್ನು ನ್ಯಾಯಾಲಯಕ್ಕೆ‌ ಹಾಜರುಪಡಿಸಿ ಹೇಳಿಕೆ ದಾಖಲಿಸಲು ಅನುಮತಿ‌ ಸಿಕ್ಕಿದೆ. ಇಂದು ಮಧ್ಯಾಹ್ನವೇ ಯುವತಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ' ಎಂದು ಯುವತಿ ಪರ ವಕೀಲ ಕೆ.ಎನ್. ಜಗದೀಶ್‌ಕುಮಾರ್ ತಿಳಿಸಿದರು.

ನ್ಯಾಯಾಲಯ ಕಲಾಪ‌ ಮುಗಿಸಿ ಹೊರಬಂದ ಅವರು, 'ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ನಮ್ಮ ಪರವಾಗಿ ಆದೇಶ ನೀಡಿದೆ. ಸಿಆರ್‌ಪಿಸಿ 164ರ ಅಡಿ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ಸಿಕ್ಕಂತಾಗಿದೆ' ಎಂದರು.

'ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಸದ್ಯದಲ್ಲೇ ಯುವತಿ ನ್ಯಾಯಾಲಯಕ್ಕೆ ಬಂದು ಹೇಳಿಕೆ‌ ನೀಡಲಿದ್ದಾರೆ' ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು