ಬುಧವಾರ, ಸೆಪ್ಟೆಂಬರ್ 22, 2021
22 °C

ಸೌದಿಯಲ್ಲಿ ಸಿಲುಕಿದ್ದ ಸಿಕ್ಕಿಂನ ಇಬ್ಬರು ಮಹಿಳೆಯರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸೌದಿ ಅರೇಬಿಯಾದಲ್ಲಿ ಸಿಲುಕಿದ್ದ ಸಿಕ್ಕಿಂನ ಇಬ್ಬರು ಮಹಿಳೆಯರು ಸೌದಿಯಲ್ಲಿರುವ ಕನ್ನಡಿಗರ ನೆರವಿನಿಂದ ಗುರುವಾರ ಬಿಡುಗಡೆಗೊಂಡು ಭಾರತಕ್ಕೆ ಮರಳಿದ್ದಾರೆ. 

ಪಶ್ಚಿಮ ಸಿಕ್ಕಿಂನ ಪೇಕಿ ಬೂಟಿಯ ಮತ್ತು ಮೇನುಕಾ ರಾಯ್‌ ಬಿಡುಗಡೆಗೊಂಡ ಮಹಿಳೆಯರು. ಮನೆ ಕೆಲಸಕ್ಕೆಂದು ಹೋದವರನ್ನು ದೇಶಕ್ಕೆ ಮರಳಲು ಬಿಡದೇ ಗೃಹಬಂಧನದಲ್ಲೇ ಇಟ್ಟು ದುಡಿಸಿಕೊಳ್ಳಲಾಗುತ್ತಿತ್ತು.

ದಾವಣಗೆರೆಯ ಫೈರೂಜಾಬಾನು ಮತ್ತು ತುಮಕೂರಿನ ಸಬಿಹಾ ಅವರೂ ಇದೇ ರೀತಿ ಹೋಗಿ ಗೃಹಬಂಧನದಲ್ಲಿ ಇದ್ದರು. ಈ ಬಗ್ಗೆ ‘prajavani.net’ ವರದಿ ಆಧರಿಸಿ ಸೌದಿಯಲ್ಲಿದ್ದ ಹಮೀದ್‌ ಪಡುಬಿದ್ರಿ ಸಹಿತ ಕನ್ನಡಿಗರು ಅವರ ಬಿಡುಗಡೆಗೆ ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಆಗ ದೇಶದ ವಿವಿಧ ಭಾಗಗಳ ಮಹಿಳೆಯರು ಹೀಗೇ ಇರುವುದು ಗೊತ್ತಾಗಿತ್ತು.

ಸೌದಿಯ ಮಾನವ ಹಕ್ಕುಗಳ ಆಯೋಗ, ಭಾರತ ಸರ್ಕಾರ, ಸೌದಿ ಸರ್ಕಾರದ ಸಹಕಾರದಿಂದಾಗಿ ಅವರನ್ನು ಬಿಡುಗಡೆಗೊಳಿಸಲು ಸಾಧ್ಯವಾಯಿತು. ಇದೇ ರೀತಿ ಭಾರತದ ಇನ್ನೂ ಅನೇಕ ಮಹಿಳೆಯರು ಸಿಲುಕಿಕೊಂಡಿದ್ದು, ಅವರ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಹಮೀದ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.