ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡದ ನಿವೃತ್ತ ಪಿಎಸ್‌ಐಗೆ ತಾತ್ಕಾಲಿಕ ಜೈಲು

Last Updated 21 ಫೆಬ್ರವರಿ 2023, 22:01 IST
ಅಕ್ಷರ ಗಾತ್ರ

ರಾಯಚೂರು: ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡದೆ ನಿರ್ಲಕ್ಷಿಸಿದ ಆರೋಪದ ಮೇಲೆ ನಿವೃತ್ತ ಪಿಎಸ್‌ಐ ಚಂದ್ರಕಾಂತ ಎಚ್‌.ಜಂಗಮ್‌ ಎಂಬುವವರಿಗೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು 15 ದಿನ ಕಾಲಾವಕಾಶ ನೀಡಿದೆ. ಈ ಅವಧಿ ಮುಗಿಯುವವರೆಗೆ ಕಕ್ಷಿದಾರನನ್ನು (ಮಾರ್ಚ್‌ 9ರವರೆಗೆ) ಜೈಲಿನಲ್ಲೇ ಇರಿಸಿ, ಮತ್ತೆ ಕೋರ್ಟ್‌ಗೆ ಹಾಜರುಪಡಿಸುವಂತೆ ಜಿಲ್ಲಾ ಕಾರಾಗೃಹದ ಅಧೀಕ್ಷಕರಿಗೆ ನ್ಯಾಯಾಧೀಶ ಜಗದೀಶ್ವರ ಅವರು ಮಂಗಳವಾರ ಆದೇಶ ನೀಡಿದರು.

ಮಹಾರಾಷ್ಟ್ರದ ಸೊಲ್ಲಾಪುರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಜಂಗಮ್‌ ಮತ್ತು ಪತ್ನಿ ಲೀಲಾವತಿ (ರಾಯಚೂರಿನವರು) ಅವರದ್ದು 2018ರಲ್ಲಿ ವಿಚ್ಛೇದನವಾಗಿತ್ತು. ಕೋರ್ಟ್‌ ಆದೇಶದಂತೆ ಪ್ರತಿ ತಿಂಗಳು ₹19,500 ಜೀವನಾಂಶ ನೀಡಲು ಚಂದ್ರಕಾಂತ ಒಪ್ಪಿದ್ದರು. ಆದರೆ, ಈಚೆಗೆ ಜೀವನಾಂಶ ಕೊಡದೆ ನಿರ್ಲಕ್ಷಿಸಿದ್ದಕ್ಕೆ ಲೀಲಾವತಿ ಅವರು ಕೋರ್ಟ್‌ ಮೊರೆ ಹೋಗಿದ್ದಾರೆ.

ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ಚಂದ್ರಕಾಂತ ಅವರು ಜೀವನಾಂಶ ನೀಡಲು ಒಪ್ಪದ ಕಾರಣ ಜೈಲು ಶಿಕ್ಷೆಗೆ ಗುರಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT