ಮುನಿರಾಜು ಅವರಿಂದ ಬಿಜೆಪಿಯ ಅನೈತಿಕತೆ, ಕೊಳಕು ಕೃತ್ಯ ಬಯಲಾಗಿದೆ: ಕಾಂಗ್ರೆಸ್

ಬೆಂಗಳೂರು: ಬಿಜೆಪಿ ಮಾಜಿ ಎಸ್. ಶಾಸಕ ಮುನಿರಾಜು ಅವರು ಬಿಜೆಪಿಯ ಅನೈತಿಕತೆ, ಅಕ್ರಮ ರಾಜಕಾರಣದ ಕೊಳಕು ಕೃತ್ಯ ಬಯಲಾಗಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಮುನಿರಾಜು ಮಾತನಾಡಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ‘ಬಿಜೆಪಿ ಮಾಜಿ ಶಾಸಕರ ಬಾಯಿಯಲ್ಲೇ ಬಿಜೆಪಿಯ ಅನೈತಿಕತೆ, ಅಕ್ರಮ ರಾಜಕಾರಣದ ಕೊಳಕು ಕೃತ್ಯ ಬಯಲಾಗಿದೆ. ಬಿಜೆಪಿ ಇಂದಿಗೂ ನಡೆಸಿಕೊಂಡು ಬಂದಿರುವ ಕಳ್ಳ ಮತಗಳ ಪ್ರಜಾಪ್ರಭುತ್ವ ವಿರೋಧಿ ಅಪರಾಧದ ಸತ್ಯ ಹೇಳಿದ್ದಾರೆ. ಬೇರೆ ಕ್ಷೇತ್ರದ ಒಬ್ಬೊಬ್ಬ ಕಾರ್ಯಕರ್ತನಿಂದ 10 ಮತಗಳನ್ನು ಹಾಕಿಸಿದ ಕುಕೃತ್ಯಕ್ಕೆ ಬಿಜೆಪಿ ಜನತೆಯ ಕ್ಷಮೆ ಕೇಳಬೇಕು’ ಆಗ್ರಹಿಸಿದೆ.
ಓದಿ... ಎಂಟಿಬಿ ನಾಗರಾಜ್ಗೆ ಡ್ಯಾನ್ಸ್ ಮಾಡುವುದರಲ್ಲೇ ಹೆಚ್ಚು ಆಸಕ್ತಿ: ಕಾಂಗ್ರೆಸ್ ಲೇವಡಿ
‘ಉಪಚುನಾವಣೆಯೊಂದರಲ್ಲಿ ಸಾವಿರ ಜನ ಕಾರ್ಯಕರ್ತರು ಬಂದು ಐದೈದು, ಹತ್ತತ್ತು ಓಟ್ ಹಾಕಿದ್ದರು’ ಎಂದು ಬಿಜೆಪಿ ಮಾಜಿ ಎಸ್. ಶಾಸಕ ಮುನಿರಾಜು ಹೇಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೀಗ ಮುನಿರಾಜು ಹೇಳಿಕೆ ಪ್ರಸ್ತಾಪಿಸಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದು, ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ.
ಓದಿ... ಐದೈದು, ಹತ್ತತ್ತು ಓಟ್ ಹಾಕಿದ್ದರೆಂದ ಮುನಿರಾಜು: ಏನಿದು ರಹಸ್ಯ ಎಂದ ಸಿದ್ದರಾಮಯ್ಯ
ಬಿಜೆಪಿ ಮಾಜಿ ಶಾಸಕರ ಬಾಯಿಯಲ್ಲೇ ಬಿಜೆಪಿಯ ಅನೈತಿಕತೆ, ಅಕ್ರಮ ರಾಜಕಾರಣದ ಕೊಳಕು ಕೃತ್ಯ ಬಯಲಾಗಿದೆ.
ಬಿಜೆಪಿ ಇಂದಿಗೂ ನಡೆಸಿಕೊಂಡು ಬಂದಿರುವ ಕಳ್ಳ ಮತಗಳ ಪ್ರಜಾಪ್ರಭುತ್ವ ವಿರೋಧಿ ಅಪರಾಧದ ಸತ್ಯ ಹೇಳಿದ್ದಾರೆ.
ಬೇರೆ ಕ್ಷೇತ್ರದ ಒಬ್ಬೊಬ್ಬ ಕಾರ್ಯಕರ್ತನಿಂದ 10 ಮತಗಳನ್ನು ಹಾಕಿಸಿದ ಕುಕೃತ್ಯಕ್ಕೆ @BJP4Karnataka ಜನತೆಯ ಕ್ಷಮೆ ಕೇಳಬೇಕು. pic.twitter.com/7PeHme6BO3
— Karnataka Congress (@INCKarnataka) May 22, 2022
ಓದಿ... ಸಾಮ್ರಾಟರ ಬೆತ್ತಲೆ ಸತ್ಯ ಬಿಚ್ಚಿಟ್ಟ ಮುನಿರಾಜು: ಎಚ್.ಡಿ. ಕುಮಾರಸ್ವಾಮಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.