ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಜರಾಯಿ ದೇಗುಲದಲ್ಲಿ ತಿಂಗಳಿಗೆ ಎರಡು ಬಾರಿ ‘ಸಪ್ತಪದಿ’

ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 22 ಜನವರಿ 2021, 19:10 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಮುಜರಾಯಿ ದೇಗುಲಗಳಲ್ಲಿ ತಿಂಗಳಲ್ಲಿ ಎರಡು ದಿನ ‘ಸಪ್ತಪದಿ’ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಫೆಬ್ರುವರಿ 17 ಮತ್ತು 25ರಂದು ಸರಳ ಸಾಮೂಹಿಕ ವಿವಾಹ ನಡೆಸಲಾಗುವುದು. ಯಾವುದಾದರೂ ಜಿಲ್ಲೆಯಲ್ಲಿ ಅವರವರ ಸಂಪ್ರದಾಯ, ಪರಂಪರೆಗೆ ಅನುಗುಣವಾಗಿ ‘ಸಪ್ತಪದಿ’ ಮಾಡುವುದಾಗಿ ಆಯಾ ಜಿಲ್ಲೆಯ ದೇಗುಲದವರು ಮುಂದೆ ಬಂದರೆ, ಅವರು ಹೇಳಿದ ದಿನಾಂಕದಂದು ಮದುವೆ ನಡೆಸಲು ಅವಕಾಶ ಮಾಡಿಕೊಡಲಾಗುವುದು. ಸರಳ ವಿವಾಹಕ್ಕೆ ಹೆಚ್ಚಿನ ಮಹತ್ವ ಕೊಡಬೇಕು’ ಎಂದರು.

ರಾಜ್ಯದಲ್ಲಿ 206 ಎ ದರ್ಜೆ ದೇಗುಲಗಳು, 310 ಬಿ ದರ್ಜೆ ದೇಗುಲಗಳು ಇವೆ. ಧಾರ್ಮಿಕ ಪರಿಷತ್ ಮೂಲಕ ಈಗಾಗಲೇ 80 ದೇಗುಲಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಕರೆಯಲಾಗಿದೆ. 11 ಕಡೆ ವ್ಯವಸ್ಥಾಪನಾ ಸಮಿತಿ ರಚನೆಯಾಗಿದೆ. ಅವಧಿ ಮುಗಿದಿರುವ ದೇಗುಲಗಳಿಗೆ ಶೀಘ್ರ ಅರ್ಜಿ ಕರೆಯಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT