ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮೋತ್ಸವದ ಮೂಲಕ ವ್ಯಕ್ತಿಪೂಜೆ ನಡೆಸಲಾಯಿತು: ಬಿಜೆಪಿ ವಾಗ್ದಾಳಿ

Last Updated 11 ಸೆಪ್ಟೆಂಬರ್ 2022, 13:20 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ದರಾಮೋತ್ಸವದ ಮೂಲಕ ವ್ಯಕ್ತಿಪೂಜೆ ನಡೆಸಲಾಯಿತು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಬಿಜೆಪಿ ಪಕ್ಷದ ಒಂದು‌ ಜನಸ್ಪಂದನೆ ಕಾರ್ಯಕ್ರಮಕ್ಕೆ ಬೆದರಿರುವ ಸಿದ್ದರಾಮಯ್ಯ ಅವರೇ, ಮುಂದೆ ಹೇಗೆ? ಇನ್ನೂ ಹಲವಾರು ಸಮಾವೇಶದ ರೂಪುರೇಷೆ ನಡೆಯುತ್ತಿದೆ, ಭ್ರಷ್ಟರಾಮಯ್ಯ ಅವರು ಈಗಲೇ ತಮ್ಮ ಬುಡಕ್ಕೆ ಬೆಂಕಿ ಬಿದ್ದವರಂತೆ ವಿಲವಿಲ ಒದ್ದಾಡುತ್ತಿದ್ದಾರೆ’ ಎಂದು ಟೀಕಿಸಿದೆ.

‘ಭಾರತ್ ಜೋಡೋ ಯಾತ್ರೆಯ ಮೂಲಕ‌ ನಕಲಿ ಗಾಂಧಿ ಕುಟುಂಬದ ಪಾದಪೂಜೆ ಮಾಡಲಾಗುತ್ತಿದೆ. ಸಿದ್ದರಾಮೋತ್ಸವದ ಮೂಲಕ ಸಿಎಂ‌ ಕುರ್ಚಿಗಾಗಿ ವ್ಯಕ್ತಿಪೂಜೆ ಮಾಡಲಾಯಿತು. ಜನ ಸಂವೇದನೆಗೆ, ಜನಸ್ಪಂದನೆಯ ಮೂಲಕ ನಾವು ಬೆಲೆ ನೀಡುತ್ತಿದ್ದೇವೆ. ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮದು ಬರೇ ಅಧಿಕಾರ ಕೇಂದ್ರೀಕೃತ ಸಮಾವೇಶಗಳಲ್ಲವೇ’ ಎಂದು ಪ್ರಶ್ನಿಸಿದೆ.

‘ಜನ್ಮ ದಿನಾಂಕವೇ ಗೊತ್ತಿಲ್ಲ ಎನ್ನುತ್ತಲೇ ಜನನ ದಿನಾಂಕದಲ್ಲೂ ಹಗರಣ ನಡೆಸಿ ಸಿದ್ರಾಮೋತ್ಸವ ಮಾಡಿದ್ದು, ಡಿಕೆಶಿಯನ್ನು ಬೆದರಿಸಲೋ, ನಕಲಿ ಗಾಂಧಿ ಪರಿವಾರವನ್ನು ಬೆದರಿಸಲೋ ಅಥವಾ ಜನಸೇರಿಸಿ‌ ಸಿಎಂ ಆಗುತ್ತೇನೆ ಎಂಬ ಭ್ರಮೆಯಿಂದ ಮಾಡಿದ್ದೋ’ ಎಂದು ಕೇಳಿದೆ.

2013 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಲ್ಲ, ಅದು ದಲಿತ‌ ನಾಯಕನಿಂದ ಕಿತ್ತುಕೊಂಡ ಪದವಿಭಿಕ್ಷೆ ಎಂದೂ ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT