ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃತೀಯ ಲಿಂಗಿಗಳಿಗೂ ಸಾಮಾಜಿಕ ಭದ್ರತೆ

ಕೆಂಗೇರಿ: ‘ಮಂಗಳ ಗ್ರಾಮ’ ಕಾಮಗಾರಿಗೆ ಭೂಮಿಪೂಜೆ– ಸಚಿವ ಸೋಮಣ್ಣ
Last Updated 15 ಜೂನ್ 2022, 5:24 IST
ಅಕ್ಷರ ಗಾತ್ರ

ಕೆಂಗೇರಿ: ‘ಸಾಮಾನ್ಯ ನಾಗರಿಕರಿಗೆ ಸಿಗುವ ಎಲ್ಲ ಸಾಮಾಜಿಕ ಭದ್ರತೆಗಳು ತೃತೀಯ ಲಿಂಗಿಗಳಿಗೆ ಸಿಗಲೇಬೇಕು’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ರಾಮೋಹಳ್ಳಿ ಬಳಿಯ ಮಾಳಿಗೊಂಡನಹಳ್ಳಿ ಗ್ರಾಮದಲ್ಲಿ ತೃತೀಯ ಲಿಂಗಿಗಳಿಗೆ ನಿರ್ಮಿಸುತ್ತಿರುವ ವಸತಿ ಸಮುಚ್ಚಯ ‘ಮಂಗಳ ಗ್ರಾಮ’ದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ದೈಹಿಕ ರಚನೆಯಲ್ಲಿನ ವ್ಯತ್ಯಾಸದಿಂದ ತೃತೀಯ ಲಿಂಗಿಗಳು ಸಾಮಾಜಿಕ ಅವಗಣನೆಗೆ ಒಳಗಾಗಿದ್ದಾರೆ. ಸಂವಿಧಾನದ ಆಶಯದಂತೆ ಎಲ್ಲ ನಾಗರಿಕ ಸೌಲಭ್ಯಗಳನ್ನು ಅವರಿಗೂ ಒದಗಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ವಸತಿ ಯೋಜನೆಯನ್ನು ರೂಪಿಸುತ್ತಿದ್ದು, ಗ್ರಾಮದ ಸರ್ವೇ ನಂ. 26ರ ಪೈಕಿ ಸುಮಾರು 2 ಎಕರೆ 20 ಗುಂಟೆಯಲ್ಲಿ 160 ಮನೆ ನಿರ್ಮಾಣ ಮಾಡಲಾಗುವುದು’ ಎಂದರು.

ವರ್ಷದ ಅವಧಿಯಲ್ಲಿ ₹ 20 ಕೋಟಿ ವೆಚ್ಚದ ಈ ಕಾಮಗಾರಿಪೂರ್ಣಗೊಳ್ಳಬೇಕು. ಯಾವುದೇ ಸಬೂಬು ಹೇಳದೆ ಅಕ್ರಮಕ್ಕೆ ಎಡೆ ಮಾಡಿಕೊಡದೆ ಗುಣಮಟ್ಟದ ಕಾಮಗಾರಿಗೆ ಮುಂದಾಗಬೇಕು ಎಂದು ತಾಕೀತು ಮಾಡಿದರು.

ಸಮತಾ ಸೈನಿಕ ದಳದ ರಾಜ್ಯ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ‘ನಗರದ ಹತ್ತು ಭಾಗಗಳಲ್ಲಿ ಮಂಗಳಮುಖಿಯರಿಗಾಗಿಯೇ ಪ್ರತ್ಯೇಕ ವಸತಿ ಕಲ್ಪಿಸುವ ಯೋಜನೆಯಿದೆ. ಸರ್ಕಾರದ ನೆರವಿನೊಂದಿಗೆ ಶೀಘ್ರದಲ್ಲೇ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

‘ಮಾಳಿಗೊಂಡನಹಳ್ಳಿ ಗ್ರಾಮದಲ್ಲಿ 5 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ರಾಜಕಾಲುವೆ ಸಮಸ್ಯೆ ಎದುರಿಸುತ್ತಿರುವ ರಾಜರಾಜೇಶ್ವರಿನಗರ ಪೆರಿಯಾರ್ ನಗರದ ಕೊಳೆಗೇರಿ ನಿವಾಸಿಗಳನ್ನು ಸ್ಥಳಾಂತರಿಸಲಾಗುವುದು. ಅವರಿಗೂ 160 ಮನೆಗಳನ್ನು ಕಟ್ಟಿಕೊಡಲಾಗುತ್ತಿದೆ’ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಎಇಇ ಚಂದ್ರಪ್ಪ ಮಾಹಿತಿನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT