ಗುರುವಾರ , ಮಾರ್ಚ್ 4, 2021
19 °C

ಎಸ್ಸೆಸ್ಸೆಲ್ಸಿ ಪರೀಕ್ಷೆಯ ‘ಯಶೋಗಾಥೆ’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಬಿಕ್ಕಟ್ಟಿನ ನಡುವೆಯೇ ನಡೆದ 2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಯಶಸ್ಸಿಗೆ ಸಂಬಂಧಿಸಿದಂತೆ ಹೊರತಂದ ‘ಯಶೋಗಾಥೆ’ ಸಂಚಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬಿಡುಗಡೆ ಮಾಡಿದರು.

ಸಮಗ್ರ ಶಿಕ್ಷಣ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕೊರೊನಾದಂಥ ವಿಷಮ ಕಾಲಘಟ್ಟ ಎದುರಾದರೆ ಹೇಗೆ ಪರೀಕ್ಷೆ ನಡೆಸಬಹುದೆಂಬುದಕ್ಕೆ ಇದು ಮಾರ್ಗದರ್ಶಿ’ ಎಂದರು.

ಇದೇ ಸಂದರ್ಭದಲ್ಲಿ ಅವರು, ಕೋವಿಡ್ ಕಾರಣದಿಂದ ಮಕ್ಕಳ ಸುರಕ್ಷತೆ ಮತ್ತು ಪರೀಕ್ಷಾ ಪಾರದರ್ಶಕತೆ ಕಾಪಾಡಿಕೊಂಡು ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಾಕ್ಷ್ಯಚಿತ್ರ ‘ವಿದ್ಯಾ ಸಂಜೀವಿನಿ’ ಬಿಡುಗಡೆ ಮಾಡಿದರು. ಅಲ್ಲದೆ, ಮೂರು ವರ್ಷಗಳಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿ ಡಿಜಿಟಲ್ ಪ್ರಕ್ರಿಯೆಗೆ ತೆರೆದುಕೊಂಡಿರುವುದನ್ನು ಅನಾವರಣಗೊಳಿಸುವ ‘ಡಿಜಿಟಲ್ ಕ್ರಾಂತಿಕಿರಣ’ ಸಾಕ್ಷ್ಯಚಿತ್ರ ಮತ್ತು 2020ರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದ ವಿಶ್ಲೇಷಣೆಯ ವಿವರಗಳನ್ನು ಒಳಗೊಂಡ ಫಲಿತಾಂಶ ವಿಶ್ಲೇಷಣೆ ಮತ್ತು ಮುಂದಿನ ವರ್ಷದ ಕ್ರಿಯಾ ಯೋಜನೆ ವಿವರಗಳ ‘ಅನಾವರಣ’ ಸಂಚಿಕೆಯನ್ನೂ ಬಿಡುಗಡೆ ಮಾಡಿದರು.

ಕಡತ ವಿಲೇವಾರಿ: ‘ಬಿಇಒ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕಡತಗಳು ದೂಳು ತಿನ್ನುತ್ತಿವೆ’ ಎಂಬ ಶಾಲಾ ಆಡಳಿತ ಮಂಡಳಿಗಳು ಆರೋಪಿಸುತ್ತಿವೆ. ಅದನ್ನು ತಡೆಯಲು ಮಾರ್ಚ್ ಒಂದರಿಂದ ವಿಭಾಗ ಮಟ್ಟ ಮತ್ತು ನಂತರ ಜಿಲ್ಲಾ ಮಟ್ಟದಲ್ಲಿ ಕಡತ ವಿಲೇವಾರಿ ಆಂದೋಲನ ನಡೆಸಲಾಗುವುದು’ ಎಂದು ಸಚಿವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು