ಭಾನುವಾರ, ಜೂನ್ 13, 2021
23 °C

ಕಾಲಿನಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಪ್ರಥಮ ದರ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಟ್ವಾಳ: ಎರಡೂ ಕೈಗಳಿಲ್ಲದೇ ಕಾಲಿನಿಂದ ಪರೀಕ್ಷೆ ಬರೆದ ಬಂಟ್ವಾಳದ ಎಸ್‌.ವಿ.ಎಸ್. ಪ್ರೌಢಶಾಲೆಯ ಕೌಶಿಕ್ ಆಚಾರ್ಯ 625ಕ್ಕೆ 424 (ಶೇ 68) ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾನೆ.

ಯಾರ ಸಹಾಯವೂ ಇಲ್ಲದೇ ಕಾಲಿನಿಂದ ಪರೀಕ್ಷೆ ಬರೆದ ಕೌಶಿಕ್ ಸಾಧನೆಗೆ, ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದರು. ಕೌಶಿಕ್ ನಗರದ ಕಂಚಿಕಾರ ಪೇಟೆಯ ರಾಜೇಶ್‌ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿ ಪುತ್ರ. ವಾಣಿಜ್ಯ ವಿಷಯದಲ್ಲಿ ಪಿಯುಸಿ ಮಾಡುವ ಹಂಬಲ ವ್ಯಕ್ತಪಡಿಸಿದ್ದಾನೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು