ಗುರುವಾರ , ಅಕ್ಟೋಬರ್ 1, 2020
21 °C
ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625

ಎಸ್ಸೆಸ್ಸೆಲ್ಸಿ ಸಾಧಕ ಅನುಷ್‌ಗೆ ಅರಣ್ಯ ರಕ್ಷಣೆಯ ಮಹತ್ವಾಕಾಂಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ‘ನಾನು ಗ್ರಾಮೀಣ ಭಾಗದಲ್ಲಿ ಬೆಳೆದಿದ್ದು, ನಮ್ಮ ಶಾಲೆಯೂ ಪ್ರಕೃತಿ ಮಡಿಲಲ್ಲಿದೆ. ಪರಿಸರ ಮತ್ತು ವಿಜ್ಞಾನವು ನನ್ನ ಇಷ್ಟದ ವಿಷಯ. ಅದಕ್ಕಾಗಿ ಐಎಫ್‌ಎಸ್ ಮಾಡಿ, ಅರಣ್ಯ–ವನ್ಯಜೀವಿ ರಕ್ಷಣೆ ಮಾಡಬೇಕು ಎಂಬುದು ನನ್ನ ತುಡಿತ...’

ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದಿರುವ ಇಲ್ಲಿನ ವಿದ್ಯಾನಗರದ ಕುಮಾರಸ್ವಾಮಿ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿ ಅನುಷ್ ಎ.ಎಲ್‌. ತನ್ನ ಕನಸುಗಳನ್ನು ಹಂಚಿಕೊಂಡರು. 

ಮೆಸ್ಕಾಂ ಕಿರಿಯ ಎಂಜಿನಿಯರ್ ಆಗಿರುವ ಇಲ್ಲಿಗೆ ಸಮೀಪದ ಬಳ್ಪ ಗ್ರಾಮದ ಎಣ್ಣೆಮಜಲು ಲೋಕೇಶ್ ಮತ್ತು ಉಷಾ ದಂಪತಿ ಪುತ್ರ.

‘ಕೊರೊನಾ ಲಾಕ್‌ಡೌನ್‌ನಿಂದ ಓದಲು ಅವಕಾಶ ಸಿಕ್ಕಿತು. ಆದರೆ, ಶಿಕ್ಷಕರ ಹಾಗೂ ಹೆಚ್ಚುವರಿ ಪುಸ್ತಕಗಳ ಪ್ರಯೋಜನ ಪಡೆಯಲು ಹಿನ್ನಡೆಯಾಯಿತು. ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡ ಕೂಡಲೇ ಪೂರ್ಣ ತಯಾರಿಯಲ್ಲಿ ತಲ್ಲೀನನಾದೆ’ ಎಂದು ಲಾಕ್‌ಡೌನ್‌ ಕುರಿತು ಪ್ರತಿಕ್ರಿಯಿಸಿದರು.

‘ವಿಜ್ಞಾನ ಮಾದರಿ ತಯಾರಿ, ಭಾಷಣ, ಕಾರ್ಯಕ್ರಮ ನಿರೂಪಣೆ ಹಾಗೂ ವಾಲಿಬಾಲ್ ಇತ್ಯಾದಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ನನ್ನ ಪಠ್ಯೇತರ ಆಸಕ್ತಿಗಳು. ಆದರೆ, ಪ್ರತಿನಿತ್ಯ ಐದು ಗಂಟೆ ಅಧ್ಯಯನ ಮಾಡುತ್ತಿದ್ದೆನು. ಯಾವುದೇ ಕೋಚಿಂಗ್‌ಗೆ ಹೋಗಿಲ್ಲ’ ಎಂದರು.

‘ಮೊದಲ ರ್‍ಯಾಂಕ್ ಎಂದು ಅಪ್ಪ ಹೇಳುವಾಗ, ಶಾಕ್, ಖುಷಿ ಎಲ್ಲವೂ ಒಮ್ಮೆಗೆ ಆಯಿತು’ ಎಂದು ಸಂಭ್ರಮಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು