ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಚಕ್ರ ವಾಹನ ಅಪಘಾತದಲ್ಲಿ ಮೂರನೇ ಸವಾರನೂ ವಿಮೆಗೆ ಅರ್ಹ: ಹೈಕೋರ್ಟ್

Last Updated 11 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬೈಕ್‌ ಅಪಘಾತ ಸಂದರ್ಭದಲ್ಲಿ ಅದರಲ್ಲಿ ಮೂವರು ಸವಾರಿ ಮಾಡುತ್ತಿದ್ದರೆ, ಮೂರನೇ ಸವಾರನಿಗೂ ಪರಿಹಾರ ನೀಡಬೇಕು ಎಂದು ವಿಮಾ ಕಂಪನಿಗೆ ಹೈಕೋರ್ಟ್ ಆದೇಶಿಸಿದೆ.

2011ರಲ್ಲಿ ಕಲಬುರ್ಗಿಯಲ್ಲಿ ನಡೆದಿದ್ದ ಅಪಘಾತ ಪ್ರಕರಣದಲ್ಲಿ ಮೂರನೇ ಸವಾರರಿಗೂ ವಿಮೆ ನೀಡಬೇಕು ಎಂದುಮೋಟಾರು ವಾಹನ ನ್ಯಾಯಮಂಡಳಿ 2012ರಲ್ಲಿ ನೀಡಿದ್ದ ಆದೇಶವನ್ನು ವಿಮಾ ಕಂಪನಿ ಪ್ರಶ್ನಿಸಿತ್ತು. ಮೂರನೇ ಸವಾರನ ಕುಟುಂಬಕ್ಕೆ ₹8.10 ಲಕ್ಷ ಪರಿಹಾರ ನೀಡಲು ತಿಳಿಸಿತ್ತು.

‘ಬೈಕ್‌ನಲ್ಲಿ ಮೂವರು ಪ್ರಯಾಣಿಸುವ ಮೂಲಕ ವಿಮಾ ಷರತ್ತು ಉಲ್ಲಂಘಿಸಲಾಗಿದೆ. ಬೈಕ್ ಸವಾರ ಸರಿಯಾದ ಚಾಲನಾ ಪರವಾನಗಿಯನ್ನೂ ಹೊಂದಿಲ್ಲ’ ಎಂದು ಕಂಪನಿ ಆರೋಪಿಸಿತ್ತು.

ಮೊಹಮದ್ ಸಿದ್ದೀಕ್ ಮತ್ತು ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನಡುವಿನ ಪ್ರಕರಣದಲ್ಲಿ ‘ಮೂವರು ಪ್ರಯಾಣ ಮಾಡುತ್ತಿದ್ದರೂ ವಿಮಾ ಪಡೆಯಬಹುದು’ ಎಂಬ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ಹಕ್ಕುದಾರರು ಉಲ್ಲೇಖಿಸಿದ್ದರು.

ವಿಮಾ ಕಂಪನಿ ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಅವರಿದ್ದ ಪೀಠ, ‘ಬೈಕ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಮೂವರು ವ್ಯಕ್ತಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಲು ಆಗುವುದಿಲ್ಲ. ಆದ್ದರಿಂದ ವಿಮೆ ಪಡೆಯುವ ಹಕ್ಕು ನಿರಾಕರಿಸಲು ಆಗುವುದಿಲ್ಲ’ ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT