ಬುಧವಾರ, ಮೇ 25, 2022
31 °C

ರಾಜ್ಯದ ಒಂದಿಂಚೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದ ಗಡಿ ಬಗ್ಗೆ ಈಗಾಗಲೇ ಎಲ್ಲವೂ ನಿರ್ಣಯ ಆಗಿದೆ. ನಮ್ಮ‌ ನಿಲುವು ಸ್ಪಷ್ಟವಾಗಿದೆ. ನಾವು ಒಂದು ಇಂಚು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗಡಿ ವಿಚಾರವಾಗಿ ಮಹಾರಾಷ್ಟ್ರ ಸಚಿವರು ನೀಡಿದ ಹೇಳಿಕೆ ಕುರಿತು ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಮಹಾರಾಷ್ಟ್ರ ರಾಜಕಾರಣ ಯಾವಾಗ ಇಕ್ಕಟ್ಟಿಗೆ ಸಿಲುಕುತ್ತದೊ ಆಗೆಲ್ಲ ಅವರು ಕರ್ನಾಟಕದ ಗಡಿ ವಿಚಾರ ತೆಗೆಯುತ್ತಾರೆ. ಅವರ ರಾಜಕೀಯ ಉಳಿವಿಗಾಗಿ ಭಾಷೆ, ಗಡಿ ವಿಚಾರವನ್ನು ಎತ್ತವುದು ಅತ್ಯಂತ ಸಣ್ಣತನ. ಅದನ್ನು ಅವರು ಕೈ ಬಿಡಬೇಕು ಎಂದು ನಾನು ಒತ್ತಾಯಿಸುತ್ತೇನೆ’ ಎಂದರು.

‘ಕನ್ನಡ ಮಾತನಾಡುವ ಹಲವಾರು ಪ್ರದೇಶ ಮಹಾರಾಷ್ಟ್ರದಲ್ಲೂ ಇದೆ. ಅದನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ನಾವು ಯೋಚಿಸುತ್ತಿದ್ದೇವೆ‘ ಎಂದರು.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು