ಬುಧವಾರ, ಜೂನ್ 23, 2021
22 °C

ಕೊರೊನಾ ಭಯ: ಬೈಸಿಕಲ್‌ನಲ್ಲಿ ವೃದ್ಧನ ಶವ ಸಾಗಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಂ.ಕೆ. ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ಇಲ್ಲಿನ ಗಾಂಧಿ ನಗರದಲ್ಲಿ ಭಾನುವಾರ ಮೃತರಾದ ವೃದ್ಧರೊಬ್ಬರ ಅಂತಿಮ ಯಾತ್ರೆಗೆ ಸ್ಥಳೀಯರು ಬಾರದಿದ್ದರಿಂದ ಕುಟುಂಬದವರು ಶವವನ್ನು ಬೈಸಿಕಲ್‌ನಲ್ಲಿ ಮಳೆಯಲ್ಲೇ ಸಾಗಿಸಿದ ಘಟನೆ ನಡೆಯಿತು.

ಕೊರೊನಾ ಸೋಂಕಿನ ಭೀತಿಯಿಂದಾಗಿ ಜನರು ನೆರವಿಗೆ ಬರಲಿಲ್ಲ ಎನ್ನಲಾಗುತ್ತಿದೆ.

ಎರಡು ದಿನಗಳಿಂದ ಜ್ವರದಿಂದ ಬಳಲುತಿದ್ದ ಆ ವ್ಯಕ್ತಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕೊರೊನಾ ಸೋಂಕಿನ ಲಕ್ಷಣಗಳಿದ್ದು ತಪಾಸಣೆ ಮಾಡಿಸಿಕೊಳ್ಳಿ ಎಂದು ವೈದ್ಯರು ತಿಳಿಸಿದ್ದರಿಂದ ಮನೆಗೆ ವಾಪಸಾಗಿದ್ದ ವೃದ್ಧ ಬೆಳಗಿನ ಜಾವ ಸಾವಿಗೀಡಾಗಿದ್ದಾರೆ.

‘ತಹಶೀಲ್ದಾರ್‌ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದನೆ ಸಿಗಲಿಲ್ಲ. ಶವ ಸಾಗಿಸಲು ಖಾಸಗಿ ವಾಹನದವರೂ ಬರಲಿಲ್ಲ’ ಎಂದು ಕುಟುಂಬದವರು ಆರೋಪಿಸಿದರು

ಬೈಸಿಕಲ್‌ ಮೇಲೆ ಶವ ಸಾಗಿಸುತ್ತಿದ ವಿಷಯ ತಿಳಿದ ಪಟ್ಟಣ ಪಂಚಾಯಿತಿ ಸದಸ್ಯ ಪುಟ್ಟಪ್ಪ ಪಟ್ಟಣಶೆಟ್ಟಿ ವಾಹನದ ವ್ಯವಸ್ಥೆ ಮಾಡಿದರು. ಬಳಿಕ ಸ್ಥಳೀಯರು ಕೂಡ ಬಂದು ಅಂತ್ಯಕ್ರಿಯೆಗೆ ನೆರವಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು