ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನವೀರ ಕಣವಿ ಮೃದು ಮಾತಿನ ಕವಿ: ಚಂದ್ರಶೇಖರ ಕಂಬಾರ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ
Last Updated 19 ಫೆಬ್ರುವರಿ 2022, 2:43 IST
ಅಕ್ಷರ ಗಾತ್ರ

ಬೆಂಗಳೂರು: ‘ಚೆನ್ನವೀರ ಕಣವಿಯವರು ಸೌಮ್ಯ ಸ್ವಭಾವದ ಹಾಗೂ ಮೃದು ಮಾತಿನ ಕವಿಯಾಗಿದ್ದರು. ಅವರು ನವ್ಯ ಮತ್ತು ನವೋದಯದ ಯಾವುದೇ ಗುಂಪಿನ ಕವಿಯಾಗದೆ, ಹಿರಿ-ಕಿರಿಯರ ಜೊತೆ ಆತ್ಮೀಯವಾಗಿ ಬೆರೆತು ಪ್ರೋತ್ಸಾಹಿಸುತ್ತಿದ್ದರು’ ಎಂದುಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷಚಂದ್ರಶೇಖರ ಕಂಬಾರ ಹೇಳಿದರು.

ಸೆಂಟ್ರಲ್‌ ಕಾಲೇಜು ಆವರಣದ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನಡೆದಚೆನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಣವಿ ಅವರ ವಿಚಾರಗಳು ಕನ್ನಡದ ಮಾರ್ಗದರ್ಶಿ ಸೂತ್ರಗಳಾಗಿರುತ್ತವೆ.ನಾನು ಧಾರವಾಡದಲ್ಲಿ ಶಿಕ್ಷಣ ಪಡೆದ ಸಂದರ್ಭದಲ್ಲಿ ಅವರ ಪ್ರೀತಿ ಹಾಗೂ ಪ್ರೋತ್ಸಾಹ ಪಡೆದಿದ್ದೇನೆ. ಅವರ ಅಗಲಿಕೆ ನನಗೆ ವೈಯಕ್ತಿಕವಾಗಿ ಬಹಳ ಬೇಸರ ತಂದಿದೆ’ ಎಂದರು.

ವಿಮರ್ಶಕ ಎಸ್.ಆರ್.ವಿಜಯಶಂಕರ್, ‘ಕಣವಿಯವರ ಸಾಹಿತ್ಯ ಹಾಗೂ ವ್ಯಕ್ತಿತ್ವ ಮೃದುವಚನ ಹಾಗೂ ಹಿತವಚನದಂತೆ ಎಲ್ಲರನ್ನೂ ಒಳಗೊಳ್ಳುತ್ತಿತ್ತು. ಅವರ ಜೊತೆಗಿನ ಬಾಂಧವ್ಯ ಮೂರು ದಶಕಗಳಿಗೂ ಮೀರಿದ್ದು’ ಎಂದರು.

ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ.ಮಹಾಲಿಂಗೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT