ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ 29ಕ್ಕೆ

ವಿದ್ವಾನ್ ರಾಜಾ ಎಸ್.ಗಿರಿ ಆಚಾರ್ಯಗೆ ಗೌರವ ಡಾಕ್ಟರೇಟ್ 
Last Updated 28 ಡಿಸೆಂಬರ್ 2020, 8:14 IST
ಅಕ್ಷರ ಗಾತ್ರ
ADVERTISEMENT
""

ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಡಿ.29 ರಂದು ವಿವಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ.ಸಿದ್ದು ಪಿ.ಅಲಗೂರ ತಿಳಿಸಿದರು.

ಘಟಿಕೋತ್ಸವದಲ್ಲಿ ಮಂತ್ರಾಲಯದ ವಿದ್ವಾನ್ ರಾಜಾ ಎಸ್.ಗಿರಿ ಆಚಾರ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ವಿಶ್ವವಿದ್ಯಾಲಯ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿದ್ವಾನ್ ರಾಜಾ ಎಸ್.ಗಿರಿ ಆಚಾರ್ಯ

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಾರ್ಯದರ್ಶಿ ಪ್ರೊ.ರಜನೀಶ್ ಜೈನ್ ಆನ್ ಲೈನ್ ನಲ್ಲಿ ಘಟಿಕೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಚಿನ್ನದ ಪದಕ ವಿಜೇತರು, ಡಾಕ್ಟರೇಟ್ ಪದವಿ ಪಡೆಯುವವರು ಸೇರಿ 96 ವಿದ್ಯಾರ್ಥಿಗಳು ಹಾಗೂ ಗಣ್ಯರು ಸೇರಿ
ಘಟಿಕೋತ್ಸವದಲ್ಲಿ ಎರಡು ನೂರಕ್ಕಿಂತ ಕಡಿಮೆ ಮಂದಿ ಪಾಲ್ಗೊಳ್ಳಲಿದ್ದಾರೆ.‌ ಕೋವಿಡ್ ‌ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಹೇಳಿದರು.

52 ಚಿನ್ನದ ಪದಕ: ಘಟಿಕೋತ್ಸವದಲ್ಲಿ 52 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯಲಿದ್ದಾರೆ. ಪದವಿಯ 11 ಹಾಗೂ 41 ವಿದ್ಯಾರ್ಥಿಗಳು ಪದಕ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಥಮ ರ್ಯಾಂಕ್ ವಿಜೇತರು; ಎಂಬಿಎ-ವೈ.ಪದ್ಮಾವತಿ, ಎಂ.ಕಾಂ- ವೈ.ಲಾವಣ್ಯ, ಬಿಎಸ್ಸಿ-ಶಮಾ ಪರ್ವೀನ್, ಎಂಎಸ್ಸಿ ಭೌತಶಾಸ್ತ್ರ- ಕೊಳ್ಳಿ ಯಶಸ್ವಿನಿ,, ಎಂಎಸ್ಸಿ ಕೈಗಾರಿಕಾ ರಸಾಯನಶಾಸ್ತ್ರ-ಪ್ರಿಯದರ್ಶಿನಿ, ರಸಾಯನಶಾಸ್ತ್ರ-ಬಿ.ಗೌತಮಿಪಾಟೀಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT