ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ವಲಯ: ಕಾಡಾನೆಗಳಿಂದ 8,382 ಸಲ ಬೆಳೆ ಹಾನಿ

ನಾಲ್ಕೇ ವರ್ಷಗಳಲ್ಲಿ ₹5 ಕೋಟಿ ಬೆಳೆ ನಷ್ಟ
Last Updated 9 ಆಗಸ್ಟ್ 2022, 7:46 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಅರಣ್ಯ ಇಲಾಖೆಯ ಹಾಸನ ವಲಯದಲ್ಲಿ ನಾಲ್ಕೇ ವರ್ಷಗಳಲ್ಲಿ ಕಾಡಾನೆಗಳು 8,382 ಸಲ ಗದ್ದೆ ಹಾಗೂ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿವೆ. ಅವುಗಳಿಂದ ₹5.03 ಕೋಟಿ ಮೊತ್ತದ ಬೆಳೆ ನಷ್ಟ ಆಗಿದೆ.

ಲೋಕಸಭೆಯಲ್ಲಿ ಹಾಸನದ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಸೋಮವಾರ ಕೇಳಿರುವ ಪ್ರಶ್ನೆಗೆ ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆಯ ರಾಜ್ಯ ಸಚಿವ ಅಶ್ವಿನ್‌ ಕುಮಾರ್‌ ಚೌಬೆ ಅವರು ಈ ಉತ್ತರ ನೀಡಿದ್ದಾರೆ.

ಆನೆಗಳ ದಾಳಿಯಿಂದ ಬೆಳೆ ಹಾನಿ ಆಗಿದೆ. ಮನುಷ್ಯರ ಮೇಲೆ ದಾಳಿ, ಆಸ್ತಿ ಹಾನಿ ಸೇರಿದಂತೆ ಒಟ್ಟು 9,011 ಪ್ರಕರಣಗಳು ಘಟಿಸಿದ್ದು, ₹6.53 ಕೋಟಿ ನಷ್ಟ ಉಂಟಾಗಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು, ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕುಗಳಲ್ಲಿ 2000ರಿಂದ ಇಲ್ಲಿವರೆಗೆ 74 ಕಾಡಾನೆಗಳನ್ನು ಸೆರೆ ಹಿಡಿದು ಪುನರ್‌ ವಸತಿ ಕಲ್ಪಿಸಲಾಗಿದೆ. ಆನೆ ಹಾಗೂ ಮಾನವ ಸಂಘರ್ಷ ತಪ್ಪಿಸಲು ಹಾಸನ ವಲಯದಲ್ಲಿ ಕರ್ನಾಟಕ ಸರ್ಕಾರವು 9.50 ಕಿ.ಮೀ. ರೈಲ್ವೆ ಬ್ಯಾರಿಕೇಡ್‌ ಹಾಗೂ 14 ಕಿ.ಮೀ. ಸೋಲಾರ್‌ ಬೇಲಿ ಅಳವಡಿಸಿದೆ ಎಂದು ಅವರು ವಿವರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT